ಕಾಲೇಜಿಗೆ ತೆರಳುತ್ತಿದ್ದ ಉಪನ್ಯಾಸಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ

ವಾರ್ಧಾ: ಮಹಾರಾಷ್ಟ್ರದ ವಾರ್ಧಾ ಎಂಬಲ್ಲಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ 25 ವರ್ಷದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಉಪನ್ಯಾಸಕಿ ಕಾಲೇಜಿಗೆ ತೆರಳುತ್ತಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ದುಷ್ಕರ್ಮಿಯನ್ನು ವಿಕ್ಕಿ ನಗ್ರಾರೆ ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿದ್ದ ಪೆಟ್ರೋಲ್ ಬಳಸಿ ಆತ ಈ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯಿಂದ ಮಹಿಳೆಗೆ 40 ಶೇಕಡದಷ್ಟು ಸುಟ್ಟ ಗಾಯಗಳಾಗಿವೆ.
"ಸ್ಥಳದಲ್ಲಿದ್ದ ಜನರು ಆಕೆಯ ಮೇಲೆ ನೀರು ಸುರಿದು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story





