Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆಟೊಮ್ಯಾಟ್ರಿಕ್ಸ್: ಟಾಟಾ ಆಲ್ಟ್ರೋಝ್...

ಆಟೊಮ್ಯಾಟ್ರಿಕ್ಸ್: ಟಾಟಾ ಆಲ್ಟ್ರೋಝ್ ಕಾರು ಮಾರುಕಟ್ಟೆಗೆ

ವಾರ್ತಾಭಾರತಿವಾರ್ತಾಭಾರತಿ3 Feb 2020 11:29 PM IST
share
ಆಟೊಮ್ಯಾಟ್ರಿಕ್ಸ್: ಟಾಟಾ ಆಲ್ಟ್ರೋಝ್ ಕಾರು ಮಾರುಕಟ್ಟೆಗೆ

ಮಂಗಳೂರು, ಫೆ.3: ಸುರಕ್ಷತೆ, ವಿನ್ಯಾಸ, ತಂತ್ರಜ್ಞಾನ, ಗ್ರಾಹಕ ಸಂತುಷ್ಟತೆ ಹಾಗೂ ಚಾಲನಾ ಅನುಭವದಲ್ಲಿ ತನ್ನ ಸ್ವರ್ಣ ಮಾನದಂಡ ದೊಂದಿಗೆ ಸಿದ್ಧವಾಗಿರುವ ಹೊಸ ಪ್ರೀಮಿಯಂ ಹ್ಯಾಚ್-ಆಲ್ಟ್ರೋಝ್ ಕಾರು ನಗರದ ಬಿಜೈನ ಆಟೊಮ್ಯಾಟ್ರಿಕ್ಸ್ ಶೋರೂಂನಲ್ಲಿ ಸೋಮವಾರ ಸಂಜೆ ಬಿಡುಗಡೆಗೊಂಡಿತು.

ಶಾಸಕ ವೇದವ್ಯಾಸ ಕಾಮತ್ ನೂತನ ಕಾರನ್ನು ಬಿಡುಗಡೆಗೊಳಿಸಿ ಮಾತನಾಡಿ, ಟಾಟಾ ಸಂಸ್ಥೆಯು ದೇಶದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಆಶಯದಂತೆ ಸಂಸ್ಥೆಯು ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ದೇಶದ ಗೌರವವನ್ನು ಸಂಸ್ಥೆ ಹೆಚ್ಚಿಸಿದೆ. ನೂತನ ಟಾಟಾ ಆಲ್ಟ್ರೋಝ್ ಕಾರನ್ನು ಜಿಲ್ಲೆಯ ಜನತೆ ಹೆಚ್ಚಿನ ಪ್ರಮಾಣದಲ್ಲಿ ಖರೀಸು ವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಟೊಮ್ಯಾಟ್ರಿಕ್ಸ್ ಶೋಂರೂಂನ ವ್ಯವಸ್ಥಾಪಕ ನಿರ್ದೇಶಕ ಡಿ.ರಾಜೇಂದ್ರ ಕುಮಾರ್, ಸಿಇಒ ಪ್ರದೀಪ್ ಮಯ್ಯ, ಟಾಟಾ ಮೋಟರ್ಸ್‌ನ ಪ್ರಾದೇಶಿಕ ಸೇಲ್ಸ್ ಮ್ಯಾನೇಜರ್ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಲ್ಲಿಕಾ ಪ್ರಾರ್ಥಿಸಿದರು. ಆಟೊಮ್ಯಾಟ್ರಿಕ್ಸ್ ಶೋಂರೂಂನ ಸಿಇಒ ಪ್ರದೀಪ್ ಮಯ್ಯ ಸ್ವಾಗತಿಸಿದರು. ಟಾಟಾ ಮೋಟರ್ಸ್‌ನ ಪ್ರಾದೇಶಿಕ ಸೇಲ್ಸ್ ಮ್ಯಾನೇಜರ್ ಪ್ರಶಾಂತ್ ಕುಮಾರ್ ವಾಹನದ ವಿಶೇಷತೆಯ ಮಾಹಿತಿ ನೀಡಿದರು. ಎಜಿಎಂ ಸೇಲ್ಸ್ ಮ್ಯಾನೇಜರ್ ದೀಪಕ್‌ ಕುಮಾರ್ ವಂದಿಸಿದರು.

ಕಾರಿನ ವಿಶೇಷತೆ

ಅತ್ಯಾಧುನಿಕ ಆಲ್ಟ್ರೋಝ್ ಕಾರು ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಯಲ್ಲಿ ಲಭ್ಯವಿದ್ದು, ‘ಬಿಎಸ್6’ ಶ್ರೇಣಿಯಲ್ಲಿ ಬಿಡುಗಡೆಗೊಂಡಿದೆ. ಈ ಕಾರು ಐದು ವಿವಿಧ ಬಣ್ಣಗಳಾದ ಹೈಸ್ಟ್ರೀಟ್ ಗೋಲ್ಡ್, ಡೌನ್‌ಟೌನ್ ರೆಡ್, ಎನೆನ್ಯೂ ವೈಟ್, ಸ್ಕೈಲೈನ್ ಸಿಲ್ವರ್, ಮಿಡ್‌ಟೌನ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಆಲ್ಟ್ರೋಝ್ ಕಾರಿನ ಎಕ್ಸ್ ಶೋರೂಂ ಬೆಲೆ 5.29 ಲಕ್ಷ ರೂ.ನಿಂದ ಆರಂಭವಾಗಲಿದೆ. ಗ್ರಾಹಕರನ್ನು ಸಂತುಷ್ಟಗೊಳಿಸಲು ಸಜ್ಜಾಗಿರುವ ಆಲ್ಟ್ರೋಝ್ ಆರು ವಿವಿಧ ಕಾರ್ಖಾನೆ ಸಜ್ಜುಗೊಂಡ ವೈಯಕ್ತಿತ ಆಯ್ಕೆಗಳಲ್ಲಿ ಬರುತ್ತವೆ.

ಹೊಸ ಆಲ್ಫಾ ರಚನೆಯ ಮೇಲೆ ಅಭಿವೃದ್ಧಿ ಪಡಿಸಲಾದ ಆಲ್ಟ್ರೋಝ್ ಮೊದಲ ವಾಹನವಾಗಿದ್ದು, ಇಂಪ್ಯಾಕ್ಟ್ 2.0 ವಿನ್ಯಾಸ ಹೊಂದಿರುವ ಎರಡನೇ ವಾಹನವಾಗಿದೆ. ಜಾಗತಿಕ ‘ಜಿಎನ್‌ಸಿಎಪಿ 5 ಸ್ಟಾರ್’ ಶ್ರೇಯಾಂಕದ ಸಾಧನೆಯೊಂದಿಗೆ ಸುರಕ್ಷತೆಯಲ್ಲಿ ಸ್ವರ್ಣ ಮಾನದಂಡವನ್ನು ಹೊಂದಿದೆ. ಈ ಶ್ರೇಯಾಂಕವನ್ನು ಪಡೆದ ಟಾಟಾ ಮೋಟರ್ಸ್‌ನ ಹಾಗೂ ಭಾರತದ ಮೊದಲನೇ ಕಾರ್ ಆಲ್ಟ್ರೋಝ್ ಆಗಿದೆ. ಇದೊಂದು ಮೈಲುಗಲ್ಲಿನ ಉತ್ಪನ್ನವಾಗಿದ್ದು, ಗ್ರಾಹಕರಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವರ್ಗಕ್ಕೆ ಕಾಲಿರಿಸುತ್ತಿದ್ದಂತೆ ಅದಕ್ಕೆ ಹೊಸ ಮಾನದಂಡಗಳನ್ನೂ ಸ್ಥಾಪಿಸಲಿದೆ.

ಆಲ್ಟ್ರೋಝ್ ಕಾರು ಅಡ್ವಾನ್ಸ್ಡ್ ಆಲ್ಫಾ ಆರ್ಕಿಟೆಕ್ಚರ್, ಎಬಿಎಸ್, ಇಬಿಡಿ, ಸಿಎಸ್ಸಿ, ಡ್ಯುಯಲ್ ಏರ್‌ಬ್ಯಾಗ್‌ಗಳಂತಹ ತನ್ನ ವರ್ಗದಲ್ಲೇ ಅತ್ಯುತ್ತಮ ಸುರಕ್ಷತಾ ಅಂಶಗಳೊಡನೆ ಬರುತ್ತದೆ. ಈ ಶಕ್ತಿಯುತ ಆಲ್ಫಾ ಆರ್ಕಿಟೆಕ್ಚರ್‌ನ ಜತೆಗೆ ಸಮಗ್ರ ಸುರಕ್ಷತಾ ವ್ಯವಸ್ಥೆಯು ಟಾಟಾ ಆಲ್ಟ್ರೋಝ್‌ನ ಪ್ರಯಾಣಿಕರು ವಿಶ್ವದರ್ಜೆಯ ಸುರಕ್ಷತೆಯನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಇಂಪ್ಯಾಕ್ಟ್ 2.0 ವಿನ್ಯಾಸ ತತ್ವದ ಮೇಲೆ ಆಧಾರಿತವಾಗಿರುವ ಆಲ್ಟ್ರೋಝ್‌ನ ಭವಿಷ್ಯಮುಖಿ ವಿನ್ಯಾಸವು ಆಧುನಿಕ, ಚುರುಕಾದ ಮತ್ತು ಅಭಿರುಚಿ ಇರುವ ಒಳಾಂಗಣಗಳನ್ನು ಹೊಂದಿದೆ. 90 ಡಿಗ್ರಿಯಷ್ಟು ತೆರೆಯಲ್ಪಡುವ ಬಾಗಿಲು ಪ್ರಯಾಣಿಕರಿಗೆ ಒಳಗೆ ಬರಲು ಹಾಗೂ ಹೊರಗೆ ಹೋಗಲು ಸಾಕಷ್ಟು ಸ್ಥಳಾವಕಾಶ ಇರುವುದನ್ನು ಖಾತರಿಪಡಿಸುತ್ತದೆ. ಲೇಸರ್ ಕಟ್ ಅಲಾಯ್ ವ್ಹೀಲ್‌ಗಳು ಮತ್ತು ಒಳಾಂಗಣದ ಪ್ರೀಮಿಯಂ ಬ್ಲಾಕ್ ಪಿಯಾನೋ ಫಿನಿಶ್ ಸರಿಸಾಟಿಯಿಲ್ಲದ ಕಾರ್ಯಕ್ಷಮತೆ ಪ್ರದರ್ಶಿಸುತ್ತದೆ.

17.78 ಸೆಂ.ಮೀ. ಟಚ್‌ಸ್ಕ್ರೀನ್ ಹರ್ಮನ್ ಇನ್ಫೋಟೇನ್‌ಮೆಂಟ್ ಮತ್ತು ವರ್ಗ ಮುಂಚೂಣಿ ಧ್ವನಿಗ್ರಹಣದೊಂದಿಗೆ ಸಜ್ಜಾಗಿರುವ ಆಲ್ಟ್ರೋಝ್, ಧ್ವನಿ ಆದೇಶ ಗುರುತಿಸುವಿಕೆ (ವಿಸಿಆರ್) ಆ್ಯಪಲ್ ಕಾರ್ ಪ್ಲೇ, ಆ್ಯಂಡ್ರಾಯ್ಡಾ ಆಟೊ ಮತ್ತು ಟರ್ನ್ ಬೈಟರ್ನ್ ಅಂಶಗಳನ್ನು ಹೊಂದಿದೆ. ಮಟ್ಟಸವಾದ ಹಿಂಬದಿ ಫ್ಲೋರ್, ಹಿಂಬದಿಯ ಎಸಿ ವೆಂಟ್‌ಗಳು, ಕ್ಯಾಬಿನ್ ಸ್ಥಳ ಮತ್ತು 24 ಯುಟಿಲಿಟಿ ಸ್ಥಳಾವಕಾಶದಿಂದ ಚಾಲನಾ ಅನುಭವವು ಆರಾಮದಾಯಕವಾಗಿರಲು ಅನುವು ಮಾಡಿಕೊಡಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X