ಮಂಗಳೂರು : ಫೆ. 5ರಿಂದ ‘ಐಡಿಎಸ್ ಡಿಸೈನ್ ಫೆಸ್ಟ್’
ಮಂಗಳೂರು, ಫೆ.4: ಮಂಗಳೂರಿನ ಇಂಡಿಯನ್ ಡಿಸೈನ್ ಸ್ಕೂಲ್‌ನ ಆಶ್ರಯದಲ್ಲಿ ಪ್ರಪ್ರಥಮ ‘ಐಡಿಎಸ್ ಡಿಸೈನ್ ಫೆಸ್ಟ್’ ಫೆ. 5 ಮತ್ತು 6ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಮುಖವಾಗಿ ಇಂಟೀರಿಯರ್ ಡಿಸೈನ್‌ಗೆ ಸಂಬಂಧಿಸಿ ಮಂಗಳೂರಿನಲ್ಲಿ ನಡೆಯಲಿರುವ ಪ್ರಪ್ರಥಮ ಅಂತರ್ ಕಾಲೇಜು ಡಿಸೈನ್ ಉತ್ಸವ ಇದಾಗಿದ್ದು ಮಂಗಳೂರು ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಸ್ಪರ್ಧಾ ಕಾರ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಪೂರಕವಾದ ಸಂವಾದ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಡಿಸೈನ್ ಸೆಲೆಬ್ರೇಷನ್ ಎಂದು ಹೆಸರಿಸಲಾದ ಕಾರ್ಯಕ್ರಮದಲ್ಲಿ ದೇಶದಾದ್ಯಂತದ ಪ್ರಶಸ್ತಿ ಪುರಸ್ಕೃತ, ಖ್ಯಾತ ವಿನ್ಯಾಸಗಾರರು ಹಾಗೂ ತಜ್ಞರು ವಿನ್ಯಾಸ, ಯೋಜನೆ ಹಾಗೂ ವೃತ್ತಿಪರ ಅಭ್ಯಾಸದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರು ಮೂಲದ ಖ್ಯಾತ ವಾಸ್ತುಶಿಲ್ಪ ತಜ್ಞೆ ಗಾಯತ್ರಿ ಶೆಟ್ಟಿ ವೃತ್ತಿಪರ ಅಭ್ಯಾಸ ಹಾಗೂ ಇಂಟೀರಿಯರ್ ಡಿಸೈನ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಫೆ.7ರಂದು ಸಂಜೆ 6 ಗಂಟೆಯಿಂದ ಇಂಟೀರಿಯರ್ ಡಿಸೈನ್ ಡಬ್ಲುಒಡಬ್ಲು ಪ್ರಶಸ್ತಿ ಪ್ರದಾನ, ಡಿಸೈನ್ ಫೆಸ್ಟ್‌ನ ವಿಜೇತರಿಗೆ ಪ್ರಶಸ್ತಿ ಪ್ರದಾನ, ಡಿಸೈನ್ ಕ್ಷೇತ್ರದಲ್ಲಿ ಪ್ರಶಂಸನೀಯ ಕೊಡುಗೆ ನೀಡಿದವರಿಗೆ ‘ಜೀವಮಾನ ಸಾಧನೆ ಪುರಸ್ಕಾರ’ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





