ದೇರೆಬೈಲ್ ಪಶ್ಚಿಮ ವಾರ್ಡಿನ ಅಭಿವೃದ್ಧಿಗೆ 5 ಕೋ.ರೂ. ಅನುದಾನ : ಶಾಸಕ ಕಾಮತ್

ಮಂಗಳೂರು, ಫೆ.4: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ಪಶ್ಚಿಮ ವಾರ್ಡಿನ ಸಮಗ್ರ ಅಭಿವೃದ್ಧಿಗೆ 5.15 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ 111.50 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ. ಕೊಟ್ಟಾರ ಕಲ್ಬಾವಿ ರಸ್ತೆಯ ಸಾಗರ್ ಕೋರ್ಟಿನ ಮುಖ್ಯ ರಸ್ತೆಯ ಸುಂದರ್ ಗಾರ್ಡನ್‌ವರೆಗಿನ ರಸ್ತೆ ಅಭಿವೃದ್ಧಿಗೆ 51 ಲಕ್ಷ ರೂ., ಕೊಟ್ಟಾರ ಇನ್ಫೋಸಿಸ್ ಹಿಂದುಗಡೆ ರಸ್ತೆ ಕಾಂಕ್ರಿಟೀಕರಣಕ್ಕೆ 1.5 ಕೋ.ರೂ.ಹಾಗೂ ತಂತ್ರಿಲೈನ್ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ 10.50 ಲಕ್ಷ ರೂ.ಒದಗಿಸಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.
ಮಳೆಹಾನಿ ಪರಿಹಾರ ನಿಧಿಯಿಂದ 25 ಲಕ್ಷ ರೂ.ಅನುದಾನ ಬಿಡುಗೊಳಿಸಲಾಗಿದೆ. ಅಬ್ಬಕ್ಕ ಬಡಾವಣೆಯ ಮಣ್ಣಿನ ರಸ್ತೆ ಡಾಮರೀಕರಣಕ್ಕೆ 5 ಲಕ್ಷ ರೂ., ಸುಂಕದಕಟ್ಟೆ ಬಳಿ ತಡೆಗೋಡೆ ದುರಸ್ತಿ ಕಾಮಗಾರಿಗೆ 5 ಲಕ್ಷ ರೂ., ದೇರೆಬೈಲ್ ಸುಂಕದಕಟ್ಟೆಯಲ್ಲಿ ತಡೆಗೋೆಡೆ ರಚನೆ ಕಾಮಗಾರಿಗೆ 5 ಲಕ್ಷ ರೂ., ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಹೊರ ಭಾಗದ ತಡೆಗೋಡೆ ರಚನೆ ಕಾಮಗಾರಿಗೆ 5 ಲಕ್ಷ ರೂ., ಅಬ್ಬಕ್ಕನಗರ ಬಳಿ ಚರಂಡಿ ದುರಸ್ತಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ.ಅನುದಾನ ಒದಗಿಸಲಾಗಿದೆ.
ಮುಖ್ಯಮಂತ್ರಿ ವಿಶೇಷ ಅನುದಾನದಡಿ 20.44 ಲಕ್ಷ ರೂ.ಮೀಸಲಿಡಲಾಗಿದೆ. ಅಶೋಕನಗರ ಹೊಗೆಬೈಲ್ ಬಳಿ ಚರಂಡಿಯ ಬದಿಗೋಡೆ ನಿರ್ಮಾಣ ಕಾಮಗಾರಿಗೆ 11.35 ಲಕ್ಷ ರೂ., ಸುಂಕದಕಟ್ಟೆಯ ಬಳಿ ತಡೆಗೋಡೆ ರಚನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 9.09 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.
ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಲ್ಲಿ 28.55 ಲಕ್ಷ ರೂ.ಅನುದಾನ ಜೋಡಿಸಲಾಗಿದೆ. ಆ ಪೈಕಿ ಸುಂಕದಕಟ್ಟೆಯಲ್ಲಿ 2 ಕಡೆಗಳಲ್ಲಿ ತಡೆಗೋಡೆ ರಚನೆ ಕಾಮಗಾರಿಗೆ 10 ಲಕ್ಷ ರೂ., ಸುಂಕದಕಟ್ಟೆಯ ಕಲ್ಲುರ್ಟಿ ದೈವಸ್ಥಾನ ರಸ್ತೆಯ ಬಳಿ ಕುಸಿದ ರಸ್ತೆ ಹಾಗೂ ತಡೆಗೋಡೆ ರಚನೆ ಕಾಮಗಾರಿಗೆ 4.60 ಲಕ್ಷ ರೂ., ಕೊಟ್ಟಾರ ಕಲ್ಬಾವಿ ಅಡ್ಡರಸ್ತೆಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 6.80 ಲಕ್ಷ ರೂ., ಕಲ್ಬಾವಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 7.15 ಲಕ್ಷ ರೂ.ಅನುದಾನ ಒದಗಿಸಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪಂಗಡ ನಿಧಿಯಿಂದ 20.45 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ. ಸುಂಕದಕಟ್ಟೆ ಕಾಲನಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಗೋಕುಲ ಡೈರಿ ಬಳಿಯ ಚರಂಡಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ ರೂ., ಉರ್ವಸ್ಟೋರಿನ ಸುಂಕದಕಟ್ಟೆಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿಗೆ 7.45 ಲಕ್ಷ ರೂ., ಜಮುನ ಕಾಂಪೌಂಡ್ ಬಳಿ ರಸ್ತೆ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ ರೂ.ಅನುದಾನ ನೀಡಲಾಗಿದೆ.
ಕೇಂದ್ರ ಸರಕಾರದ 14ನೆ ಹಣಕಾಸು ಯೋಜನೆಯಡಿ ಅಶೋಕನಗರ ಹೈೂಗೆಬೈಲ್ ರಸ್ತೆಯ ಗುರುಂಪೆ ಪರಿಸರದಲ್ಲಿ ರಸ್ತೆ ಅಭಿವೃಧ್ಧಿ ಕಾಮಗಾರಿಗೆ 9.17 ಲಕ್ಷ ರೂ.ಬಿಡುಗಡೆಯಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 2 ಕೋ.ರೂ. ಬಿಡುಗಡೆಗೊಳಿಸಲಾಗಿದೆ. ಸುಂಕದಕಟ್ಟೆ ಕಾಲನಿ ಅಭಿವೃದ್ಧಿಗೆ 1 ಕೋ.ರೂ. ಹಾಗೂ ಅಶೋಕನಗರ ಅಸೋಕ ವಿದ್ಯಾಲಯ ಎದುರಿನಿಂದ ಉರ್ವ ವರೆಗೆ ಮುಖ್ಯರಸ್ತೆ ಅಭಿವೃದ್ಧಿಗೆ 1 ಕೋ.ರೂ. ನೀಡಲಾಗಿದೆ.







