ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ: ಸಮಾನ ಮನಸ್ಕರ ಒಕ್ಕೂಟಕ್ಕೆ ಗೆಲುವು

ಮಂಗಳೂರು, ಫೆ.4: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ಒಕ್ಕೂಟದ ಎಲ್ಲ 12 ಮಂದಿ ಭರ್ಜರಿ ಗೆಲುವು ಸಾಧಿಸಿದರು.
ಗುರುಪುರದ ಶ್ರೀ ಸತ್ಯದೇವತೆ ಸಭಾಗೃಹದಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮಂಗಳೂರು ಎಆರ್‌ಸಿಎಸ್ ಉಸ್ತುವಾರಿ ಅಧಿಕಾರಿ ತ್ರಿವೇಣಿ ರಾವ್ ಕೆ. ಫಲಿತಾಂಶ ಪ್ರಕಟಿಸಿದರು.
ವಿಜೇತರು ಪಡೆದ ಮತ: ಸಾಲಗಾರ ಸಾಮಾನ್ಯ- ಉದಯ ಭಟ್ ಜಿ.ಎಂ. (611), ಓಂ ಪ್ರಕಾಶ್ ಶೆಟ್ಟಿ (551), ಜಿ.ಕೆ. ಕಿಟ್ಟಣ್ಣ ರೈ(556), ವಿನೋದ್ ಮಾಡ(446), ಸಚಿನ್ ಕುಮಾರ್ ಅಡಪ(495), ಸಾಲಗಾರ ಹಿಂದುಳಿದ ಪ್ರವರ್ಗ ‘ಎ’ ಸ್ಥಾನ: ಕಿಶೋರ್ ಕುಮಾರ್(460), ಶೀನ ಕೋಟ್ಯಾನ್ ಜಿ(492), ಸಾಲಗಾರ ಮಹಿಳಾ ಮೀಸಲು ಸ್ಥಾನ: ನಳಿನಾಕ್ಷಿ(504), ಲತಾ ಆರ್. ಶೆಟ್ಟಿ(443), ಸಾಲಗಾರ ಪರಿಶಿಷ್ಟ ಮೀಸಲು ಸ್ಥಾನ: ಸೋಮಯ್ಯ(440), ಸಾಲಗಾರ ಪರಿಶಿಷ್ಟ ಪಂಗಡ ಮೀಸಲು ಸ್ಥಾನ: ರಾಜೇಶ್(449), ಸಾಲಗಾರರಲ್ಲದ ಸ್ಥಾನ: ಶ್ರೀನಿವಾಸ ಸುವರ್ಣ(245) ವಿಜೇತರಾದರು.





