ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆಗೆ ತಡೆಯನ್ನು ಪ್ರಶ್ನಿಸಿದ್ದ ಅರ್ಜಿಯ ಬಗ್ಗೆ ಬುಧವಾರ ತೀರ್ಪು

ಹೊಸದಿಲ್ಲಿ,ಫೆ.4: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ಜಾರಿಗೆ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯ ಕುರಿತು ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ತನ್ನ ಆದೇಶವನ್ನು ಪ್ರಕಟಿಸಲಿದೆ.
ನಾಲ್ವರು ತಪ್ಪಿತಸ್ಥರ ಪೈಕಿ ಮುಕೇಶಕುಮಾರ ಸಿಂಗ್ ಮತ್ತು ವಿನಯಕುಮಾರ ಶರ್ಮಾ ಅವರಿಗೆ ನೇಣು ಕುಣಿಕೆಯಿಂದ ಪಾರಾಗಲು ಯಾವುದೇ ಮಾರ್ಗವುಳಿದಿಲ್ಲ.
ಎಲ್ಲ ನಾಲ್ವರೂ ತಪ್ಪಿತಸ್ಥರಿಗೆ ಫೆ.1ಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಅನಿರ್ದಿಷ್ಟಾವಧಿಗೆ ತಡೆಯಾಜ್ಞೆ ನೀಡಿದ ಬಳಿಕ ಸರಕಾರವು ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಗಲ್ಲು ಶಿಕ್ಷೆ ಜಾರಿಗೊಳಿಸಲು ಹೊಸ ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ.
Next Story





