ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಸನ್ಮಾನ

ಮಂಗಳೂರು, ಫೆ.4: ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ,ಅಂತರ್ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಅನಘಾ ಅವರನ್ನು ಕದ್ರಿ ಹಿಲ್ಸ್ ನಲ್ಲಿರುವ ಅನಘಾರ ಮನೆಗೆ ಭೇಟಿ ನೀಡಿ ಶಾಸಕ ಯು.ಟಿ.ಖಾದರ್ ಸನ್ಮಾನಿಸಿದರು.
2020ರ ಜ.4,5ರಂದು ಸಿಂಗಾಪುರದಲ್ಲಿ ನಡೆದ ಐಸ್ ಸ್ಕೇಟಿಂಗ್‌ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 22 ಚಿನ್ನದ ಪದಕ,9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ.
ಮಂಗಳೂರಿನ್ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Next Story





