ಮಂಗಳೂರು: ಸಿಟಿಗೋಲ್ಡ್‌ನಿಂದ ಕುಡಿಯುವ ನೀರಿನ ವ್ಯವಸ್ಥೆ

ಮಂಗಳೂರು, ಫೆ.4: ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿಗೋಲ್ಡ್‌ನ 20ನೇ ವರ್ಷದ ಪ್ರಯುಕ್ತ ಸಂಸ್ಥೆಯಿಂದ ಕಂಕನಾಡಿ ಬೈಪಾಸ್‌ನ ಸಿಟಿಗೋಲ್ಡ್ ಮಳಿಗೆ ಮುಂಭಾಗದ ಬಸ್ ತಂಗುದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಾಜಸೇವೆಗೆ ಮುಂದಾಗಿದೆ.
ಕುಡಿಯುವ ನೀರಿನ ವ್ಯವಸ್ಥೆಗೆ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ನವೀನ್ ಡಿಸೋಜ ಚಾಲನೆ ನೀಡಿದರು. ಕರಿಯಂಗಳ ಗ್ರಾಪಂ ಸದಸ್ಯ ಇಬ್ರಾಹೀಂ ನವಾಝ್ ಮುಖ್ಯಅತಿಥಿಯಾಗಿ ಆಗಮಿಸಿದ್ದರು. ಸಿಟಿಗೋಲ್ಡ್‌ನ ಬ್ರಾಂಚ್ ಮ್ಯಾನೇಜರ್ ಅನ್ವರ್ ಸಾದತ್, ಸಿಬ್ಬಂದಿ ಉಪಸ್ಥಿತರಿದ್ದರು.
Next Story





