ಕೊರೊನಾ ಶಂಕಿತರ ಮಾಹಿತಿ ನೀಡಿ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಫೆ. 4: ಕೊರೊನಾ ವೈರಸ್ ಸೋಂಕಿತ ಪ್ರದೇಶವಾದ ಚೀನಾ, ಹಾಂಕಾಂಗ್, ಸೌತ್ ಈಸ್ಟ್ ಏಷ್ಯಾ, ಜಪಾನ್, ದಕ್ಷಿಣ ಕೊರಿಯ ಹಾಗೂ ವಿಶ್ವದ ವಿವಿಧ ಭಾಗದಿಂದ ದ.ಕ. ಜಿಲ್ಲೆಗೆ ಬಂದಿದ್ದರೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಕೊರೊನಾ ವೈರಸ್ ರೋಗದ ಲಕ್ಷಣಗಳು ಇರಲಿ, ಇಲ್ಲದೇ ಇರಲಿ ಅಥವಾ ಕೊರೋನ ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕವಿದ್ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ (ದೂ.ಸಂ.: 0824- 2423672) ಅಥವಾ ಜಿಲ್ಲಾ ಸರ್ವೆಲೆನ್ಸ್ ಘಟಕ (0824- 2427316) ಸಂಪರ್ಕಿಸಬಹುದು. 104 ಉಚಿತ ಸಹಾಯವಾಣಿಯಾಗಿದೆ. ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Next Story





