ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ನಾಪತ್ತೆ

ಮಂಗಳೂರು, ಫೆ.4: ನಗರದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಪಶ್ಚಿಮ ಬಂಗಾಳ ನಿವಾಸಿ ಎಸ್.ಕೆ. ಇಲ್ಯಾಸ್ ಅಲಿ (27) ನಾಪತ್ತೆಯಾದವರು.
ಝಾಕರಿಯಾ ಅಲಿ ಮತ್ತು ಅವರ ಸಹೋದರ ಎಸ್.ಕೆ. ಇಲ್ಯಾಸ್ ಅಲಿ ಎಂಬವರು ಅಹ್ಮದ್ ಅಲಿಯವರ ಜತೆಯಲ್ಲಿ ಟೈಲ್ಸ್ ಕೆಲಸ ಮಾಡಿ ಕೊಂಡಿದ್ದರು. ಜ.27ರಂದು ಮಧ್ಯಾಹ್ನ 1:30ಕ್ಕೆ ರೈಲ್ವೆ ಪಾರ್ಕಿಂಗ್‌ನಿಂದ ಎಸ್.ಕೆ. ಇಲ್ಯಾಸ್ ಅಲಿಯು ಅಹ್ಮದ್ ಅಲಿ ಅವರಿಂದ ಹಣ ಪಡೆದುಕೊಂಡು ಪಶ್ಚಿಮ ಬಂಗಾಳದ ಮೆದಿನಿಪುರಕ್ಕೆ ಹೋಗಿದ್ದರು. ಆದರೆ ಬಳಿಕ ಅವರು ನಾಪತ್ತೆಯಾಗಿದ್ದು, ಎಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.
ಚಹರೆ: 5.8ಅಡಿ ಎತ್ತರ, ಕಪ್ಪು ಮೈ ಬಣ್ಣ, ಕೆಂಪು ಬಣ್ಣದ ಟೀಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಂಗಾಳಿ, ಹಿಂದಿ, ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಕೂದಲು, ಗಡ್ಡ ಬಿಟ್ಟಿರುತ್ತಾರೆ. ಬಲಕೈಯಲ್ಲಿ ಕಪ್ಪುದಾರ ಕಟ್ಟಿರುತ್ತಾರೆ. ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.





