Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಾಯುತ್ತಿರುವುದು ನಮ್ಮ ಪ್ರಜ್ಞೆ

ಸಾಯುತ್ತಿರುವುದು ನಮ್ಮ ಪ್ರಜ್ಞೆ

ನಾ. ದಿವಾಕರನಾ. ದಿವಾಕರ4 Feb 2020 11:34 PM IST
share
ಸಾಯುತ್ತಿರುವುದು ನಮ್ಮ ಪ್ರಜ್ಞೆ

ಸಂಸದರು, ಶಾಸಕರು ಮತ್ತು ರಾಜಕೀಯ ನಾಯಕರು ಸಾರ್ವಜನಿಕ ವಲಯದಲ್ಲಿ ಮಾತನಾಡುವಾಗ ತಮ್ಮ ಸ್ಥಾನದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಕನಿಷ್ಠ ವಿವೇಕ ಹೊಂದಿರಬೇಕಲ್ಲವೇ? ಹಾಗೊಮ್ಮೆ ಲಕ್ಷ್ಮಣ ರೇಖೆ ದಾಟುವ ನಾಯಕರಿಗೆ ಬುದ್ಧಿವಾದ ಹೇಳುವ ವಿವೇಚನೆ ಪಕ್ಷಗಳ ಹಿರಿಯ ನಾಯಕರಿಗೆ ಇರಬೇಕಲ್ಲವೇ? ದಿಲ್ಲಿಯ ಬೀದಿಯಲ್ಲಿ ನಿಂತು ಬಂದೂಕಿನ ಮಾತುಗಳನ್ನಾಡುವ ನಾಯಕರು ಸರಕಾರದ ಘನತೆಗೆ ಧಕ್ಕೆ ಉಂಟುಮಾಡುತ್ತಾರೆ ಎನ್ನುವ ಪರಿಜ್ಞಾನ ಆಡಳಿತಾರೂಢ ಪಕ್ಷದಲ್ಲಿ ಇರಬೇಕಲ್ಲವೇ? ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ಅಧಿಕಾರಸ್ಥರು ಈ ಪ್ರಜ್ಞೆಯನ್ನು ಕಳೆದುಕೊಂಡಿದ್ದರೆ ಅವರನ್ನು ಎಚ್ಚರಿಸಲು ಸುಪ್ರೀಂಕೋರ್ಟ್ ಮುಂದಾಗಬೇಕಿದೆ.


 ದಿಲ್ಲಿಯ ಜಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಇತ್ತ ಉತ್ತರ ಪ್ರದೇಶದಲ್ಲಿ ವಿಶ್ವಹಿಂದೂ ಪರಿಷತ್ ನಾಯಕನ ಹತ್ಯೆ ನಡೆದಿದೆ. ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ, ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂಸೆಗೆ ಪ್ರಚೋದಿಸುತ್ತಿರುವ ಬಿಜೆಪಿ ನಾಯಕರಿಗೆ ಈ ಹತ್ಯೆಗಳನ್ನು ಖಂಡಿಸುವ ನೈತಿಕ ಅರ್ಹತೆಯೂ ಇಲ್ಲವಾಗಿದೆ. ಪ್ರತಿರೋಧದ ದನಿಯನ್ನು, ವಿರೋಧಿ ದನಿಯನ್ನು ಇಲ್ಲವಾಗಿಸುವ ಹಂತದಿಂದ ಎರಡು ಹೆಜ್ಜೆ ಮುನ್ನಡೆದಿರುವ ಸಮಾಜ ಈಗ ವಿರೋಧ ವ್ಯಕ್ತಪಡಿಸುವವರನ್ನೇ ಇಲ್ಲವಾಗಿಸುವ ಹಂತ ತಲುಪಿರುವುದಕ್ಕೆ ಈ ರಾಜಕೀಯ ದ್ವೇಷ ಮತ್ತು ಮತಾಂಧತೆಯೇ ಕಾರಣ ಎನ್ನುವುದು ಸ್ಪಷ್ಟ. ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಚುನಾಯಿತ ಸರಕಾರಕ್ಕೆ ಈ ಬೆಳವಣಿಗೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಇರಬೇಕು. ‘‘ಮಾತು ಕೇಳದಿದ್ದರೆ ಬಂದೂಕು ಮಾತನಾಡುತ್ತದೆ’’ ಎಂದು ಸಾರ್ವಜನಿಕ ವೇದಿಕೆಯಲ್ಲಿ ಘೋಷಿಸುವ ಒಬ್ಬ ಮುಖ್ಯಮಂತ್ರಿಗೆ ತಮ್ಮ ರಾಜ್ಯದಲ್ಲೂ ಬಂದೂಕುಧಾರಿಗಳು ಹೇರಳವಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಕು. ಬಂದೂಕಿನ ಮೂಲಕವೇ ಮಾತನಾಡಲು ಬಯಸುವ ಯೋಗಿ ಆದಿತ್ಯನಾಥ್ ಅತ್ತಕಡೆಯಿಂದ ಬಳಸಲಾಗುವ ಬಂದೂಕಿಗೆ ಬಲಿಯಾಗುವ ಅಮಾಯಕರ ಕುರಿತೂ ಯೋಚಿಸುವುದು ಒಳಿತಲ್ಲವೇ ? ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿರುವ ಅಮಾಯಕರು ಹರಕೆಯ ಕುರಿಗಳಂತೆ ಕಾಣುತ್ತಿದ್ದಾರೆ. ಬಂದೂಕಿನ ಮೂಲಕ ಮಾತನಾಡುವವರಿಗೆ ಗುಂಡೇಟಿನ ಭೀತಿ ಇರುವುದಿಲ್ಲ. ಏಕೆಂದರೆ ಅಭೇದ್ಯ ರಕ್ಷಣಾ ಕವಚ ಇಲ್ಲದೆ ಇವರು ಹೊರಗೆ ಹೋಗುವುದೇ ಇಲ್ಲ. ಇಂತಹ ರಾಜಕೀಯ ನಾಯಕರ ಮಾತುಗಳಿಗೆ ಮರುಳಾಗಿ ತಮ್ಮ ಬಳಿ ಇರುವ ಬಂದೂಕಿನಿಂದ ಮಾತನಾಡಲು ಮುಂದಾಗುವ ಉನ್ಮತ್ತರು ಗುಂಡೇಟಿಗೆ ಬಲಿಯಾಗುತ್ತಾರೆ ಅಥವಾ ಪೊಲೀಸರ ಅತಿಥಿಯಾಗುತ್ತಾರೆ.

ಒಂದು ರೀತಿಯಲ್ಲಿ ಭಾರತದ ಪ್ರಸ್ತುತ ಸನ್ನಿವೇಶ ಬಾಲಿವುಡ್ ಸಿನೆಮಾದಂತೆ ಕಾಣುತ್ತಿದೆ. ಭದ್ರ ಕೋಟೆಗಳಲ್ಲಿ ಕುಳಿತು ಹಿಂಸೆಗೆ ಪ್ರಚೋದಿಸುವ ನಾಯಕರ ತೆವಲುಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ರಾಜಕೀಯ ಷಡ್ಯಂತ್ರದಲ್ಲಿ ತಾವು ಕೇವಲ ಪಗಡೆಯ ಕಾಯಿಗಳು ಎಂಬ ವಾಸ್ತವ ಅವರಿಗೆ ಅರಿವಾಗುತ್ತಿಲ್ಲ. ಸಂಸದರು, ಶಾಸಕರು ಮತ್ತು ರಾಜಕೀಯ ನಾಯಕರು ಸಾರ್ವಜನಿಕ ವಲಯದಲ್ಲಿ ಮಾತನಾಡುವಾಗ ತಮ್ಮ ಸ್ಥಾನದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಕನಿಷ್ಠ ವಿವೇಕ ಹೊಂದಿರಬೇಕಲ್ಲವೇ? ಹಾಗೊಮ್ಮೆ ಲಕ್ಷ್ಮಣ ರೇಖೆ ದಾಟುವ ನಾಯಕರಿಗೆ ಬುದ್ಧಿವಾದ ಹೇಳುವ ವಿವೇಚನೆ ಪಕ್ಷಗಳ ಹಿರಿಯ ನಾಯಕರಿಗೆ ಇರಬೇಕಲ್ಲವೇ? ದಿಲ್ಲಿಯ ಬೀದಿಯಲ್ಲಿ ನಿಂತು ಬಂದೂಕಿನ ಮಾತುಗಳನ್ನಾಡುವ ನಾಯಕರು ಸರಕಾರದ ಘನತೆಗೆ ಧಕ್ಕೆ ಉಂಟುಮಾಡುತ್ತಾರೆ ಎನ್ನುವ ಪರಿಜ್ಞಾನ ಆಡಳಿತಾರೂಢ ಪಕ್ಷದಲ್ಲಿ ಇರಬೇಕಲ್ಲವೇ? ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ಅಧಿಕಾರಸ್ಥರು ಈ ಪ್ರಜ್ಞೆಯನ್ನು ಕಳೆದುಕೊಂಡಿದ್ದರೆ ಅವರನ್ನು ಎಚ್ಚರಿಸಲು ಸುಪ್ರೀಂಕೋರ್ಟ್ ಮುಂದಾಗಬೇಕಿದೆ. ಕಳೆದ ಹಲವು ದಿನಗಳಲ್ಲಿ ದಿಲ್ಲಿಯಲ್ಲಿ ಕೇಳಿಬರುತ್ತಿರುವ ಹಿಂಸೆಯನ್ನು ಪ್ರಚೋದಿಸುವ ಹೇಳಿಕೆಗಳನ್ನು ಸುಪ್ರೀಂಕೋರ್ಟ್ ಗಮನಿಸಿ ಸ್ವಪ್ರೇರಣೆಯಿಂದ ಕ್ರಮ ಕೈಗೊಳ್ಳಬಹುದಲ್ಲವೇ? ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಅತ್ಯಗತ್ಯ ಎನಿಸುವುದಿಲ್ಲವೇ?

ಗುಂಡೇಟಿಗೆ ಬಲಿಯಾದವರು ಯಾರು ಎನ್ನುವುದು ನಮ್ಮ ನಿಲುಮೆಯ ಭೂಮಿಕೆಯಾಗಬಾರದು. ಯಾವುದೇ ತಪ್ಪುಮಾಡದೆ ಜೀವ ಕಳೆದುಕೊಳ್ಳುವ, ಗುಂಡೇಟಿನಿಂದ ಘಾಸಿಗೊಳಗಾಗುವ ವ್ಯಕ್ತಿ ಏಕೆ ಹಲ್ಲೆಗೊಳಗಾಗುತ್ತಿದ್ದಾರೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ದುರಂತ ಎಂದರೆ ಮಾನವ ಪ್ರಜ್ಞೆಯನ್ನು ಕಳೆದುಕೊಂಡಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಪ್ರತಿಯೊಂದು ಉಸಿರಾಡುವ ಜೀವವೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿಬಿಟ್ಟಿದೆ. ಈ ಅಸ್ಮಿತೆಯೇ ಸಾವನ್ನು ಸಂಭ್ರಮಿಸುವ ವಿಕೃತಿಯನ್ನು ಸೃಷ್ಟಿಸಿದೆ. ‘‘ಸತ್ತವನು ನಮ್ಮವನಲ್ಲ ಬಿಡು’’ ಎನ್ನುವ ಅಮಾನವೀಯ ಆಲೋಚನೆ ಮನಸ್ಸುಗಳನ್ನು ಭ್ರಷ್ಟಗೊಳಿಸಿರುವಂತೆಯೇ, ‘‘ಕೊಂದವನು ನಮ್ಮವನಲ್ಲವೇ?’’ ಎಂದು ಹೆಮ್ಮೆ ಪಡುವ ವಿಕೃತ ಮನಸ್ಥಿತಿ ಸುಂದರ ಮನಸ್ಸುಗಳನ್ನು ಕಂಗೆಡಿಸಿದೆ. ಈ ಮನಸ್ಥಿತಿ ರೂಪುಗೊಳ್ಳಲು ಕಾರಣರಾರು ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿಲ್ಲ. ರಾಜಕೀಯ ನಾಯಕರ ಭಾಷಣಗಳೇ ನಿರೂಪಿಸುತ್ತಿವೆ. ಸಾಮ್ರಾಜ್ಯಗಳು ನಿರ್ಮಾಣವಾಗುವುದೇ ಅಮಾಯಕರ ಸಮಾಧಿಯ ಮೇಲೆ. ಅಲೆಕ್ಸಾಂಡರ್‌ನಿಂದ ಟ್ರಂಪ್‌ವರೆಗೂ ಇದು ಸತ್ಯ. ಭಾರತದಲ್ಲೂ ಸಾವಿರಾರು ಅಮಾಯಕರ ಸಮಾಧಿಗಳು ಈಗಾಗಲೇ ಸಿದ್ಧವಾಗಿವೆ. ಈ ಹೊಂಡದಲ್ಲಿ ಮತ್ತಷ್ಟು ಅಮಾಯಕ ಜೀವಗಳನ್ನು ತುಂಬಿ ಭವ್ಯ ಸಾಮ್ರಾಜ್ಯ ನಿರ್ಮಿಸುವ ಸಾಮ್ರಾಟರ ಕನಸಿಗೆ ಯುವ ಪೀಳಿಗೆ ಬಲಿಯಾಗುತ್ತಿದೆ.

 ಇದು ನಾವು ಬಯಸುವ ಭಾರತ ಅಲ್ಲ ಎಂದು ಹೇಳುವ ವಿವೇಚನೆಯನ್ನೂ ಕಳೆದುಕೊಂಡಿರುವ ಸಮಾಜದ ಸುಶಿಕ್ಷಿತ ವಲಯ ಉನ್ಮಾದಕ್ಕೆ ಬಲಿಯಾಗಿದೆ. ಕಟ್ಟಡ ನಿರ್ಮಾಣ ಪ್ರಕ್ರಿಯೆಯಲ್ಲಿ ಜಲ್ಲಿ, ಮರಳು, ಸಿಮೆಂಟು ಮಿಶ್ರಣ ಮಾಡುವ ಯಂತ್ರದಲ್ಲಿ ಯಾವ ಕ್ರಿಮಿಕೀಟಗಳಿವೆ ಎಂದು ಕಟ್ಟಡದ ಒಡೆಯ ಲೆಕ್ಕಿಸುವುದಿಲ್ಲ. ಕಟ್ಟಡ ನಿರ್ಮಿಸುವ ಮೇಸ್ತ್ರಿಯೂ ಲೆಕ್ಕಿಸುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಜೀವ ಕಳೆದುಕೊಳ್ಳುವ ಕ್ರಿಮಿ ಕೀಟಗಳ ಬಗ್ಗೆ ಅನುಕಂಪವೂ ಇರುವುದಿಲ್ಲ. ಏಕೆಂದರೆ ಈ ಮಿಶ್ರಣ ಒಂದು ಸುಭದ್ರ ಅಡಿಪಾಯವನ್ನು ನಿರ್ಮಿಸಲು, ಒಂದು ಭವ್ಯ ಸೌಧವನ್ನು ನಿರ್ಮಿಸಲು ಅನಿವಾರ್ಯ. ರಾಜಕೀಯ ನೆಲೆಯಲ್ಲಿ ಸಾಮ್ರಾಜ್ಯ ಕಟ್ಟಲು ಹವಣಿಸುವ ಮೇಸ್ತ್ರಿಗಳಿಗೆ ಜನಸಾಮಾನ್ಯರು ಈ ಕ್ರಿಮಿಕೀಟಗಳಂತೆಯೇ ಕಾಣುತ್ತಾರೆ. ಜಾತಿ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳು ಕಾಂಕ್ರಿಟ್ ಮಿಶ್ರಣಕ್ಕೆ ಬಳಕೆಯಾಗುವ ವಸ್ತುಗಳಾಗಿ ಪರಿಣಮಿಸುತ್ತವೆ. ತಾವು ಸದ್ದಿಲ್ಲದೆ ಸಾವನ್ನಪ್ಪುವ ಕ್ರಿಮಿಗಳಲ್ಲ ಎಂದು ಕೂಗಿ ಹೇಳುವ ವಿವೇಚನೆ, ವಿವೇಕವನ್ನೂ ಕಳೆದುಕೊಳ್ಳುವ ಮಟ್ಟಿಗೆ ಉನ್ಮಾದವನ್ನು ಸೃಷ್ಟಿಸಲಾಗಿದೆ. ಹಾಗಾಗಿಯೇ ಗುಂಡೇಟಿಗೆ ಬಲಿಯಾದ ಒಂದು ಜೀವದ ಮೇಲೆ ಮತಧರ್ಮಗಳ ಹೊದಿಕೆಯನ್ನು ಕ್ಷಣ ಮಾತ್ರದಲ್ಲಿ ಹೊದಿಸಿಬಿಡುತ್ತಾರೆ. ತಕ್ಷಣವೇ ಸಾವು ಸ್ವೀಕಾರಾರ್ಹವಾಗಿಬಿಡುತ್ತದೆ. ಇಲ್ಲವಾದರೆ ಖಂಡನಾರ್ಹವಾಗಿಬಿಡುತ್ತದೆ. ಅಸ್ಮಿತೆಗಳ ಚೌಕಟ್ಟಿನಲ್ಲಿ ಹೆಣಗಳು ಬಂಡವಾಳವಾಗಿಬಿಡುತ್ತವೆ. ಸಂಭಾವ್ಯ ಸಾಮ್ರಾಜ್ಯಕ್ಕೆ ಈ ಹೆಣಗಳೇ ಅಡಿಪಾಯವಾಗುತ್ತವೆ.

ಇಲ್ಲಿ ಸಾಯುವುದು, ಸಾಯುತ್ತಿರುವುದು, ಮುಂದೆ ಸಾವಿಗೆ ಸಿದ್ಧವಾಗಿರುವುದು ಕೇವಲ ಉಸಿರಾಡುವ ಜೀವಗಳಲ್ಲ. ನಮ್ಮ ಮಾನವ ಪ್ರಜ್ಞೆಯೂ ಸಹ. ಈ ಸರಳ ಸತ್ಯವನ್ನು ಗ್ರಹಿಸಲೂ ಸಾಧ್ಯವಾಗದ ಮಟ್ಟಿಗೆ ನಾವು ನಿಷ್ಕ್ರಿಯರಾಗಿದ್ದೇವೆ ಎಂದರೆ ತಪ್ಪು ನಮ್ಮದೇ ಅಲ್ಲವೇ ? 

share
ನಾ. ದಿವಾಕರ
ನಾ. ದಿವಾಕರ
Next Story
X