Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೊರೋನ ಚಿಕಿತ್ಸೆ: ಅಪಾಯಕಾರಿ ಶಿಫಾರಸುಗಳು

ಕೊರೋನ ಚಿಕಿತ್ಸೆ: ಅಪಾಯಕಾರಿ ಶಿಫಾರಸುಗಳು

ಆರ್. ಪ್ರಸಾದ್ಆರ್. ಪ್ರಸಾದ್4 Feb 2020 11:58 PM IST
share
ಕೊರೋನ ಚಿಕಿತ್ಸೆ: ಅಪಾಯಕಾರಿ ಶಿಫಾರಸುಗಳು

 ಭಾರತದ ಇಪ್ಪತ್ತು ವಿಮಾನ ನಿಲ್ದಾಣಗಳಲ್ಲಿ ಕೊರೋನ ಸೋಂಕು ತಗಲಿರುವ ಸೂಚನೆ ಇರುವ ಪ್ರಯಾಣಿಕರು ಕಂಡು ಬಂದಾಗ ಅವರನ್ನು ವೈದ್ಯಕೀಯ ದಿಗ್ಬಂಧನದಲ್ಲಿ ಇರಿಸಿ ಹೆಚ್ಚಿನ ಪರೀಕ್ಷೆ/ ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗುತ್ತದೆಯೇ? ಅಥವಾ ಮನೆಯಲ್ಲಿ ಇದ್ದು ಯುನಾನಿ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗುತ್ತದೆಯೇ? ಇಂತಹ ಬಿಕ್ಕಟ್ಟಿನ ಒಂದು ಸಮಯದಲ್ಲಿ ಆರೋಗ್ಯ ಸಚಿವಾಲಯ ಹಾಗೂ ಆಯುಷ್ ಸಚಿವಾಲಯ ಸರಿಯಾಗಿ ಯೋಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಕೊರೋನ ವೈರಸ್ ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹರಡಿರುವಾಗ, ಅದರಿಂದ ಸೋಂಕಿತರ ಸಂಖ್ಯೆ ಹನ್ನೆರಡು ಸಾವಿರಕ್ಕಿಂತಲೂ ಹೆಚ್ಚಾಗಿರುವಾಗ ಮತ್ತು ಚೀನಾದ ಮುಖ್ಯ ಭೂಪ್ರದೇಶದಲ್ಲಿ ಅದರಿಂದಾಗಿ ಮೃತಪಟ್ಟವರ ಸಂಖ್ಯೆ 400ನ್ನೂ ದಾಟಿರುವಾಗ ನಮ್ಮ ದೇಶದ ಆಯುಷ್ ಸಚಿವಾಲಯವು ನಾಗರಿಕರನ್ನು ದಿಕ್ಕು ತಪ್ಪಿಸುವಂತಹ ಒಂದು ಸಲಹಾ ಪತ್ರವನ್ನು ಪ್ರಕಟಿಸಿದೆ. ಅದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆಯೊಂದರಲ್ಲಿ ''ಕೊರೋನ ವೈರಸನ್ನು ನಿಭಾಯಿಸಲು'' ಅದು ಕೆಲವು ಯುನಾನಿ ಔಷಧಗಳನ್ನು ಶಿಫಾರಸು ಮಾಡಿದೆ. ಸೋಂಕು ತಡೆಯಲು ನೆರವಾಗಲು ಅದು ಕೆಲವು ಆಯುರ್ವೇದ ಔಷಧಿಗಳನ್ನು ಕೂಡ ಶಿಫಾರಸು ಮಾಡಿದೆ.

ಕೊರೋನ ವೈರಸ್ ಬಗ್ಗೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದ ಒಂದು ತಿಂಗಳ ಬಳಿಕವೂ ಕೂಡ ಕೊರೋನ ವೈರಸ್‌ಗೆ ನಿರ್ದಿಷ್ಟ ಔಷಧಿ ಇಲ್ಲವಾಗಿದೆ. ಅಲ್ಲದೆ ಯಾವುದೇ ಔಷಧಿ ಸಿದ್ಧವಾಗಿ ಲಭಿಸಬಹುದೆಂಬ ಯಾವುದೇ ಸೂಚನೆಯೂ ಕಾಣಿಸುತ್ತಿಲ್ಲ. ಹೀಗಾಗಿ ಕೊರೋನ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿದೆ. ರೋಗದ ವಿರುದ್ಧ ಹೋರಾಡಲು, ಅವರು ಸಾಕಷ್ಟು ಸಮಯ ಬದುಕುವಂತೆ ಮಾಡಲು ಅವರಿಗೆ ಬೇಕಾಗುವಷ್ಟು ಆಮ್ಲಜನಕ ಪೂರೈಸಲಾಗುತ್ತಿದೆ.

ಇಂತಹ ಒಂದು ಸನ್ನಿವೇಶದಲ್ಲಿ ಆಯುಷ್ ಸಚಿವಾಲಯದ ಶಿಫಾರಸು (ಪ್ರಿಸ್ಕ್ರಿಪ್ಷನ್)ಗಳು ಭಾರೀ ಬೇಜವಾಬ್ದಾರಿಯುತವಷ್ಟೇ ಅಲ್ಲ, ಅಪಾಯಕಾರಿ ಕೂಡ ಹೌದು. ಅಲ್ಲದೆ ಇದು ಸರಕಾರದ (ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ) ಸದ್ಯದ ಕ್ರಮಕ್ಕೆ ವಿರೋಧವಾಗಿದೆ: ಸದ್ಯ ಅದು ಸೋಂಕು ತಗುಲಿದವರನ್ನು ಅವರ ಸೋಂಕು ಇತರರಿಗೆ ಹರಡದಂತೆ ಅವರನ್ನು ಪ್ರತ್ಯೇಕಿಸಿ ಅವರಿಗೆ ಪ್ರಾಥಮಿಕ ಹಾಗೂ ರೋಗ ಪ್ರತಿಬಂಧಕ ಚಿಕಿತ್ಸೆ ನೀಡುವ ಕ್ರಮವನ್ನು ಅಳವಡಿಸಿಕೊಂಡಿದೆ.

ಸರಕಾರ ಉಲ್ಲೇಖಿಸಿರುವ ಯಾವುದೇ ಔಷಧಿ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗೆ ಗುರಿಯಾಗಿರುವ ಔಷಧಿಯಲ್ಲ. ಈ ಔಷಧಿಗಳನ್ನು ಕೊರೋನ ವೈರಸ್‌ಗೆ ತುತ್ತಾದವರಿಗೆ ನೀಡಿ ಅವುಗಳ ಪರಿಣಾಮಗಳನ್ನು ಪರೀಕ್ಷಿಸಲಿಲ್ಲ. ಸಚಿವಾಲಯವು ಔಷಧಿಗಳನ್ನು ಉಲ್ಲೇಖಿಸಿದೆಯಾದರೂ ತನ್ನ ಪ್ರಕಟನೆೆಯಲ್ಲಿ ಅದು ಈ ಸೋಂಕಿಗೆ ಗುರಿಯಾದವರಲ್ಲಿ ಕಂಡುಬರುವ ಯಾವುದೇ ರೋಗ ಲಕ್ಷಣಗಳನ್ನು ಪಟ್ಟಿ ಮಾಡಿಲ್ಲ. ಅಲ್ಲದೆ ಒಂದು ನಿರ್ದಿಷ್ಟ ರೋಗ ಲಕ್ಷಣ ಕಂಡು ಬಂದಲ್ಲಿ ಯಾವ ನಿರ್ದಿಷ್ಟ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಕೂಡ ಹೇಳಿಲ್ಲ. ಸೋಂಕಿಗೊಳಗಾದವರಲ್ಲಿ ಹಲವಾರು ರೋಗ ಲಕ್ಷಣಗಳು ಕಂಡುಬರುತ್ತವೆ. ಕೆಲವರಲ್ಲಿ ಜ್ವರ ಕೆಮ್ಮಿನಂತಹ ಸೌಮ್ಯ ಲಕ್ಷಣಗಳು ಕಂಡು ಬಂದರೆ, ಇನ್ನು ಕೆಲವರಲ್ಲಿ ನ್ಯುಮೋನಿಯಾ ಮತ್ತು ಉಸಿರಾಟ ವೈಫಲ್ಯದಂತಹ ಗಂಭೀರ ಲಕ್ಷಣಗಳು ಕಂಡುಬರುತ್ತವೆ.

ಸರಕಾರದ ಪತ್ರಿಕಾ ಪ್ರಕಟನೆೆಯು ಅವಸರದಲ್ಲಿ ಹೊರಡಿಸಿದ ಮಾಹಿತಿಯ ತಪ್ಪುಪ್ರಕಟನೆಯಾಗಿದೆ. ಆಯುರ್ವೇದೀಯ ಔಷಧಿಗಳ ಕುರಿತಾದ ಪ್ರಕಟನೆಯ ಭಾಗವು ನೋಂದಾಯಿತ ಆಯುರ್ವೇದ ವೈದ್ಯರ ಸಮಾಲೋಚನೆ ಸಲಹೆ ಬಳಿಕವಷ್ಟೇ ಔಷಧಿಯನ್ನು ತೆಗೆದುಕೊಳ್ಳಬೇಕು ಎನ್ನುತ್ತದೆ. ಆದರೆ ಯುನಾನಿ ಹಾಗೂ ಹೋಮಿಯೋಪತಿ ಔಷಧಿಗಳ ಬಗ್ಗೆ ಅಂತಹ ಯಾವ ಮುನ್ನೆಚ್ಚರಿಕೆಯ ಹೇಳಿಕೆ ಇಲ್ಲ.

ಯುನಾನಿ ಔಷಧಿಗಳನ್ನು ಶಿಫಾರಸು ಮಾಡಿ ಅವುಗಳನ್ನು ತೆಗೆದುಕೊಳ್ಳುವಂತೆ ಸೂಚಿಸುವ ಮೂಲಕ ಸರಕಾರದ ಆಯುಷ್ ಸಚಿವಾಲಯವು ಜನರು ತಮಗೆ ತಾವೇ ತಮ್ಮ ಪಾಡಿಗೆ ಔಷಧಿ ತೆಗೆದುಕೊಳ್ಳಲು, ಸೆಲ್ಫ್ ಮೆಡಿಕೇಟ್ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಇದು ಅಪಾಯಕಾರಿ. ಈ ಔಷಧಿಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ ಎನ್ನುವುದಕ್ಕೆ ಕೂಡ ಯಾವುದೇ ಪುರಾವೆಗಳಿಲ್ಲದಿರುವಾಗ, ಅಂತಹ ಔಷಧಿ ತೆಗೆದುಕೊಳ್ಳುವ ಜನರು ಪರಸ್ಪರ ಸಮೀಪ ಸಂಪರ್ಕಕ್ಕೆ ಬಂದಾಗ ಅವರಿಗೆ ಸೋಂಕು ತಗಲುವ ಗಂಭೀರ ಅಪಾಯ ಇನ್ನಷ್ಟು ಹೆಚ್ಚಾಗಬಹುದು. ಯಾಕೆಂದರೆ ಸೋಂಕು ತಗಲಿದವರಿಂದ ಅವರ ಸಂಪರ್ಕಕ್ಕೆ ಬರುವವರಿಗೆ, ಮನುಷ್ಯನಿಂದ-ಮನುಷ್ಯನಿಗೆ ಸಂಪರ್ಕದ ಮೂಲಕ ಸೋಂಕು ಹರಡುತ್ತದೆ ಎಂಬುದನ್ನು ಚೀನಾ ಹಾಗೂ ಇತರ ದೇಶಗಳಲ್ಲಿ ದಾಖಲಿಸಲಾಗಿದೆ.

ಸೋಂಕು ತಗಲಿದವರಿಗೆ ಚಿಕಿತ್ಸೆ ನೀಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡ ಆಯುಷ್ ಸಚಿವಾಲಯಕ್ಕೆ ಅರಿವಿದ್ದಂತೆ ಕಾಣುವುದಿಲ್ಲ. ಚೀನಾದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ರಕ್ಷಣಾತ್ಮಕ ಸಾಧನಗಳನ್ನು ಧರಿಸಿದ್ದ ಹದಿನಾರು ಮಂದಿ ಆರೋಗ್ಯ ಕಾರ್ಯಕರ್ತರು ಸ್ವತಃ ಅನಾರೋಗ್ಯ ಪೀಡಿತರಾದರೆಂಬುದು ಕೂಡ ಸಚಿವಾಲಯಕ್ಕೆ ತಿಳಿದಂತಿಲ್ಲ.

 ಭಾರತದ ಇಪ್ಪತ್ತು ವಿಮಾನ ನಿಲ್ದಾಣಗಳಲ್ಲಿ ಕೊರೋನ ಸೋಂಕು ತಗಲಿರುವ ಸೂಚನೆ ಇರುವ ಪ್ರಯಾಣಿಕರು ಕಂಡು ಬಂದಾಗ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಹೆಚ್ಚಿನ ಪರೀಕ್ಷೆ/ ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗುತ್ತದೆಯೇ? ಅಥವಾ ಮನೆಯಲ್ಲಿ ಇದ್ದು ಯುನಾನಿ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗುತ್ತದೆಯೇ? ಇಂತಹ ಬಿಕ್ಕಟ್ಟಿನ ಒಂದು ಸಮಯದಲ್ಲಿ ಆರೋಗ್ಯ ಸಚಿವಾಲಯ ಹಾಗೂ ಆಯುಷ್ ಸಚಿವಾಲಯ ಸರಿಯಾಗಿ ಯೋಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

        

 ಕೃಪೆ: ದಿ ಹಿಂದೂ

share
ಆರ್. ಪ್ರಸಾದ್
ಆರ್. ಪ್ರಸಾದ್
Next Story
X