ಕಾರ್ಕಳ: ಆರ್ಥಿಕ ಗಣತಿ-ನಿಖರ ಮಾಹಿತಿ ನೀಡಲು ಮನವಿ
ಉಡುಪಿ, ಫೆ.5: ಪ್ರತೀ ಐದು ವರ್ಷಗಳಿಗೊಮ್ಮೆ ದೇಶದಾದ್ಯಂತ ಆರ್ಥಿಕ ಗಣತಿಯನ್ನು ಕೈಗೊಳ್ಳಲಾಗುತ್ತಿದ್ದು, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಈ ಬಾರಿ 7ನೇ ಆರ್ಥಿಕ ಗಣತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆ್ಯಪ್ ಮೂಲಕ ಆರ್ಥಿಕ ಗಣತಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಈ ಆರ್ಥಿಕ ಗಣತಿಯನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮುಖಾಂತರ ನಡೆಸಲಾ ಗುತ್ತಿದ್ದು, ಈ ಯೋಜನೆಯಡಿ ನಿಯೋಜಿಸಿರುವ ಗಣತಿದಾರರ ಮೂಲಕ ಅವರ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರತೀ ಮನೆ, ಕಟ್ಟಡಗಳಿಗೆ ಬೇಟಿ ನೀಡಿ ಅಲ್ಲಿ ನಡೆಯುವ ಉದ್ಯಮ, ವ್ಯಾಪಾರ, ಸೇವೆಗಳು ಇತ್ಯಾದಿ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿಂತೆ ಮಾಹಿತಿ ಕಲೆ ಹಾಕಲಾಗುತ್ತದೆ.
ಸಾರ್ವಜನಿಕರು ನಿಖರ ಹಾಗೂ ಅವಶ್ಯಕ ಮಾಹಿತಿ ನೀಡಿ ಸಹಕರಿಸುವಂತೆ ಹಾಗೂ ಆರ್ಥಿಕ ಗಣತಿ ಯೋಜನೆಯು ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಗಣತಿಯಾಗಿದ್ದು, ಆರ್ಥಿಕ ಗಣತಿಗೂ, ಸಿಎಎ, ಎನ್‌ಆರ್‌ಸಿ ಗೂ ಯಾವುದೇ ಸಂಬಂವಿರುವುದಿಲ್ಲಎಂದುಕಾರ್ಕಳಪುರಸಾ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.





