ಉಡುಪಿ: ಗೋವಾ ಮೂಲದ ಬಾಲಕನ ರಕ್ಷಣೆ

ಉಡುಪಿ, ಫೆ.5: ಉಡುಪಿ ರೈಲ್ವೆ ರಕ್ಷಣಾ ದಳದ ಪೊಲೀಸರು, ಕೇರಳದಿಂದ ಗೋವಾ ಕಡೆಗೆ ಹೋಗುವ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತಿದ್ದ ಗೋವಾ ಮೂಲದ 15 ವರ್ಷ ಪ್ರಾಯದ ಬಾಲಕನನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ರೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ಆತನನ್ನು ವಿಚಾರಿಸಿದಾಗ, ಕೇರಳದ ಕಣ್ಣೂರಿನ ಪಪ್ಪಿನ್‌ಸ್ಸೇರಿಯ ಮನೆಯಿಂದ ಯಾರಿಗೂ ಹೇಳದೆ ಬಂದಿದ್ದು ತಿಳಿದು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದರು.
ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭೇಟಿ ನೀಡಿ ವಿಚಾರಿಸಿ ದಾಗ ವಿಪರೀತ ಸಿಗರೇಟ್ ಸೇವನೆ ಚಟ ಇರುವ ಬಗ್ಗೆ ತಿಳಿದುಬಂದಿದ್ದು, ಪೋಷಕರ ಬಗ್ಗೆ ಮಾಹಿತಿ ಪಡೆದು ಬಾಲಕನನ್ನು ಹೆಚ್ಚಿನ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್, ಮೊಹಮ್ಮದ್, ಮಕ್ಕಳ ಸಹಾಯವಾಣಿಯ ತ್ರಿವೇಣಿ, ವೃಷಕ್ ಭಾಗವಹಿಸಿದ್ದರು.
Next Story





