ಮಂಗಳೂರು: ಫೆ.15ರಂದು ಫೋರಮ್ ಮಾಲ್‌ನಲ್ಲಿ ಬಿರಿಯಾನಿ ಸವಿಯುವ ಸ್ಪರ್ಧೆ

ಮಂಗಳೂರು, ಫೆ.5: ನಾನ್-ವೆಜ್ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಮಾಂಸಾಹಾರಿಗಳಿಗೆ ಅತಿಪ್ರಿಯವಾದ ಖ್ಯಾದ್ಯವೆಂದರೆ ಅದು ಬಿರಿಯಾನಿ. ರುಚಿರುಚಿಯಾದ ಬಿರಿಯಾನಿ ಸವಿಯುವ ಸ್ಪರ್ಧೆಯೊಂದನ್ನು ಮಂಗಳೂರು ನಗರದ ಪಾಂಡೇಶ್ವರದಲ್ಲಿನ ಫೋರಮ್ ಫಿಝಾ ಮಾಲ್ ಫೆ.15ರಂದು ಆಯೋಜಿಸಿದೆ.
ಉತ್ಸಾಹಿಗಳು ಬಿರಿಯಾನಿ ಸವಿಯುವುದರ ಜತೆಗೆ ಸಾವಿರಾರು ರೂ. ಬೆಲೆಬಾಳುವ ಗಿಫ್ಟ್ ವೋಚರ್‌ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು. ಅತಿವೇಗವಾಗಿ ಬಿರಿಯಾನಿ ತಿನ್ನುವ ಮೂಲಕ ದಾಖಲೆ ನಿರ್ಮಿಸುವ ಅಗ್ರ ಮೂವರು ವಿಜಯಶಾಲಿಗಳಿಗೆ 50 ಸಾವಿರ ರೂ. ಮೌಲ್ಯದ ಉಡುಗೊರೆಯ ವೋಚರ್‌ಗಳನ್ನು ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಕೇವಲ 110 ರೂ. ಪಾವತಿಸಿ, https://www.forummalls.in/forum-fiza/events/ ಈ ಲಿಂಕ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಲು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.
Next Story





