ಅಫ್ಘಾನ್‌ನಿಂದ ಅಮೆರಿಕ ಸೈನಿಕರ ವಾಪಸಾತಿಗೆ ಟ್ರಂಪ್ ಇಚ್ಛೆ

ವಾಶಿಂಗ್ಟನ್, ಫೆ. 5: ಅಫ್ಘಾನಿಸ್ತಾನದಿಂದ ಅಮೆರಿಕದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ತನ್ನ ಇಚ್ಚೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಕೊನೆಯಿರದ ಯುದ್ಧದಲ್ಲಿ ಲಕ್ಷಾಂತರ ಮಂದಿಯನ್ನು ಕೊಲ್ಲುವ ಇಚ್ಛೆ ನನಗಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ತಾಲಿಬಾನ್ ಉಗ್ರರೊಂದಿಗೆ ಈಗ ನಡೆಯುತ್ತಿರುವ ಮಾತುಕತೆಗಳಿಗೆ ಬೆಂಬಲ ಸೂಚಿಸಿದರು.
‘‘ನಾನು ಅಫ್ಘಾನಿಸ್ತಾನದ ಲಕ್ಷಾಂತರ ಜನರನ್ನು ಕೊಲ್ಲಲು ಇಚ್ಛಿಸುವುದಿಲ್ಲ. ಅವರಲ್ಲಿ ಹೆಚ್ಚಿನವರು ಸಂಪೂರ್ಣ ಅಮಾಯಕರು’’ ಎಂದು ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
‘‘ಕಾನೂನು ಅನುಷ್ಠಾನ ಸಂಸ್ಥೆಯಾಗಿ ಇತರ ದೇಶಗಳ ಸೇವೆ ಮಾಡುವುದು ನಮ್ಮ ಕೆಲಸವಲ್ಲ. ಇವರು ಯುದ್ಧ ನಿಪುಣರು. ಜಗತ್ತಿನಲ್ಲೇ ಶ್ರೇಷ್ಠರು. ಅವರು ಗೆಲುವಿಗಾಗಿ ಹೋರಾಟ ನಡೆಸಲು ಬಯಸಬಹುದು ಅಥವಾ ಹೋರಾಟ ನಡೆಸದೆಯೂ ಇರಬಹುದು’’ ಎಂದರು.
Next Story





