ಗೋವುಗಳನ್ನು ತಿನ್ನುವ ಹುಲಿಗಳಿಗೂ ಶಿಕ್ಷೆ ನೀಡಬೇಕು: ಎನ್ಸಿಪಿ ಶಾಸಕ

ಫೈಲ್ ಚಿತ್ರ
ಹೊಸದಿಲ್ಲಿ, ಜ. 5: ಗೋವುಗಳನ್ನು ತಿನ್ನುವ ಮಾನುಷ್ಯರಿಗೆ ಶಿಕ್ಷೆ ನೀಡುವಂತೆ, ಗೋವುಗಳನ್ನು ತಿನ್ನುವ ಹುಲಿಗಳಿಗೂ ಶಿಕ್ಷೆ ನೀಡಬೇಕು ಎಂದು ಎನ್ಸಿಪಿ ಶಾಸಕ ಚರ್ಚಿಲ್ ಅಲೆಮಾವೊ ಹೇಳಿದ ಹಿನ್ನೆಲೆಯಲ್ಲಿ ಗೋವಾ ವಿಧಾನ ಸಭೆಯಲ್ಲಿ ಬುಧವಾರ ಹುಲಿಗಳ ಬಗ್ಗೆ ಚರ್ಚೆಯಾಗಿದೆ. ಬುಧವಾರ ವಿಧಾನ ಸಭೆ ಅಧಿವೇಶನದ ಸಂದರ್ಭ ಗಮನ ಸೆಳೆಯುವ ಗೊತ್ತುವಳಿ ಮೂಲಕ ಪ್ರತಿಪಕ್ಷದ ನಾಯಕ ದಿಗಂಬರ ಕಾಮತ್ ಈ ವಿಷಯ ಎತ್ತಿದರು. ಈ ಸಂದರ್ಭ ಮನುಷ್ಯರು ದನವನ್ನು ತಿಂದರೆ ಯಾವ ಶಿಕ್ಷೆ ನೀಡಲಾಗುತ್ತದೆ ? ಹುಲಿಗಳು ಗೋವುಗಳನ್ನು ತಿಂದರೆ ಯಾವ ಶಿಕ್ಷೆ ನೀಡಲಾಗುತ್ತದೆ ? ಎಂದು ಪ್ರಶ್ನಿಸಿದ ಚರ್ಚಿಲ್ ಅಲೆಮಾವೊ, ಎರಡೂ ತಪ್ಪಿಗೆ ಒಂದೇ ರೀತಿಯ ಶಿಕ್ಷೆ ನೀಡಬೇಕು ಎಂದರು. ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಹುಲಿಗಳು ಮುಖ್ಯ. ಆದರೇ ಮಾನವರಿಗೆ ಸಂಬಂಧಿಸಿ ಹಸುಗಳು ಮುಖ್ಯ. ಇದು ತಾರತಮ್ಯದ ನಿಲುವು. ಆದುದರಿಂದ ಇಂತಹ ಘಟನೆಗಳಲ್ಲಿ ಮನುಷ್ಯರ ಕುರಿತ ಆಯಾಮವನ್ನು ಕೂಡ ನಿರ್ಲಕ್ಷಿಸಬಾರದು ಎಂದರು.
Next Story





