ಜಾಮೀನಿನಲ್ಲಿ ಜೈಲಿನಿಂದ ಬಿಡುಗಡೆಯಾದ ಅತ್ಯಾಚಾರ ಆರೋಪಿ ಚಿನ್ಮಯಾನಂದಗೆ ಭರ್ಜರಿ ಸ್ವಾಗತ

ಲಕ್ನೋ,ಫೆ.5: ಉತ್ತರ ಪ್ರದೇಶದ ಶಹಜಹಾನ್‌ಪುರ ಜೈಲಿನಿಂದ ಬುಧವಾರ ಬಿಡುಗಡೆಗೊಂಡ ಅತ್ಯಾಚಾರ ಆರೋಪಿ,ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರಿಗೆ ಬೆಂಬಲಿಗರಿಂದ ಭರ್ಜರಿ ಸ್ವಾಗತ ಕಾದಿತ್ತು. ಅಲಹಾಬಾದ್ ಉಚ್ಚ ನ್ಯಾಯಾಲಯವು ಎರಡು ದಿನಗಳ ಹಿಂದೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಬೆಂಬಲಿಗರು ‘ಸ್ವಾಮೀಜಿ ಮಹಾರಾಜ್ ಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಿರುವ,ಗುಲಾಬಿ ಹೂವುಗಳೊಂದಿಗೆ ಎರಡೂ ಕೈಗಳನ್ನು ಜೋಡಿಸಿ ಅವರಿಗೆ ಗೌರವ ಸಲ್ಲಿಸುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ದಾಖಲಾಗಿವೆ.
ಚಿನ್ಮಯಾನಂದ (72)ರ ಟ್ರಸ್ಟ್‌ಗೆ ಸೇರಿದ ಶಹಜಹಾನ್‌ಪುರದ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಚಿನ್ಮಯಾನಂದ ತನ್ನ ಮೇಲೆ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಳು. ಇದರ ಬೆನ್ನಲ್ಲೇ ಹಣಕ್ಕಾಗಿ ಚಿನ್ಮಯಾನಂದರನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದ ಆರೋಪದಲ್ಲಿ ವಿದ್ಯಾರ್ಥಿನಿಯನ್ನೂ ಪೊಲೀಸರು ಬಂಧಿಸಿದ್ದರು.
ಜಾಮೀನು ಮಂಜೂರು ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಶಹಜಹಾನ್‌ಪುರದಿಂದ ಲಕ್ನೋಕ್ಕೆ ವರ್ಗಾಯಿಸಿ ಉಚ್ಚ ನ್ಯಾಯಾಲಯವು ಆದೇಶಿಸಿದೆ.
#WATCH Shahjahanpur: Former Union Minister & expelled BJP leader Chinmayanand released from jail after getting bail from Allahabad High Court in the alleged rape case of a law student. pic.twitter.com/WXM2svIKIQ
— ANI UP (@ANINewsUP) February 5, 2020







