ವೈಜ್ಞಾನಿಕ ಬರವಣಿಗೆ ಕುರಿತು ರಾಜ್ಯಮಟ್ಟದ ಕಾರ್ಯಾಗಾರ

ಉಡುಪಿ, ಫೆ.6: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಎಡಿಟೋರಿಯಲ್ ಬೋರ್ಡ್, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಜರ್ನಲ್ ಆಫ್ ಆಯುಷ್ ಸೈನ್ಸ್ ಇವುಗಳ ಆಶ್ರಯದಲ್ಲಿ ವೈಜ್ಞಾನಿಕ ಬರವಣಿಗೆ ಮತ್ತು ಅಂಕಣ ಮುದ್ರಣ ಎಂಬ ವಿಷಯದ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಫೆ.3ರಂದು ಕಾಲೇಜಿನ ಭಾವಪ್ರಕಾ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.
ಕಾರ್ಯಾಗಾರವನ್ನು ಹಾಸನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು.
ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಕಾಲೇಜಿನ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿಭಾಗದ ಅಸೋಸಿ ಯೆಟ್ ಡೀನ್ ಡಾ.ನಾಗರಾಜ್ ಎಸ್., ಮೈಸೂರು ಸರಕಾರಿ ಆರ್ಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ವಿ. ರಾಜೇಂದ್ರ ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮತ್ತು ಸಂಯೋಜಿತ ವಿಜ್ಞಾನಗಳ ಸಂಶೋಧನ ಕೇಂದ್ರದ ನವೀನ್ ಚಂದ್ರ ಎನ್.ಎಚ್. ಸ್ವಾಗತಿಸಿ ದರು. ಡಾ.ವಿಶ್ವನಾಥ್ ವಂದಿಸಿದರು. ಡಾ.ಅರುಣ್ ಕುಮಾರ್ ಹಾಗೂ ಡಾ.ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿಭಾಗದ ಡೀನ್ ಡಾ.ನಿರಂಜನ್ ರಾವ್ ವಹಿಸಿದ್ದರು. ಪ್ರಾಧ್ಯಾಪಕ ಡಾ.ವಿ.ರಾಜೇಂದ್ರ, ಅಸೋಸಿಯೆಟ್ ಡೀನ್ ಡಾ.ನಾಗರಾಜ್ ಎಸ್. ಉಪಸ್ಥಿತರಿದ್ದರು.
ಡಾ.ಪದ್ಮಕಿರಣ್ ಸಿ. ಸ್ವಾಗತಿಸಿದರು. ಸುಚಿತ್ರಾ ಎನ್.ಪ್ರಭು ವಂದಿಸಿದರು. ಡಾ.ಅರುಣ್ ಕುಮಾರ್ ಹಾಗೂ ಡಾ.ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







