ಕೆವೈಸಿ ಅಧಿಕಾರಿ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ದೂರು
ಉಡುಪಿ, ಫೆ.6: ಅಂಬಲಪಾಡಿಯ ಕೆ.ಗೋಪಾಲಕೃಷ್ಣ(80) ಎಂಬವರ ಮೊಬೈಲ್‌ಗೆ ಕೆವೈಸಿ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರು ಎಟಿಎಂ ಕಾರ್ಡ್‌ನ ಪಿನ್ ನಂಬರ್ ಪಡೆದು ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.4ರಂದು ಕೆ.ಗೋಪಾಲಕೃಷ್ಣ ಅವರ ಮೊಬೈಲ್‌ಗೆ ಕೆವೈಸಿ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಕೆವೈಸಿ ಅವಧಿ ಮುಗಿ ದಿದೆ, ಅದನ್ನು ಕೂಡಲೇ ನವೀಕರಣ ಮಾಡಬೇಕು ಎಂದು ಗೋಪಾಲಕೃಷ್ಣ ಅವರನ್ನು ನಂಬಿಸಿದನು. ಹಾಗೆ ಎಂಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಓಟಿಪಿ ನಂಬರ್‌ಗಳನ್ನು ಪಡೆದು, ಗೋಪಾಲಕೃಷ್ಣ ಅವರ ಖಾತೆ ಯಿಂದ ಫೆ.4 ಮತ್ತು 5ರ ಮಧ್ಯಾವಧಿಯಲ್ಲಿ 3 ಬಾರಿ ಒಟ್ಟು 1,19,000/ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





