ಫೆ.8ರಿಂದ ಮಿತ್ತೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಪ್ರತಿನಿಧಿ ಸಭೆ
ಪುತ್ತೂರು; ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆಯ ಸ್ವರೂಪ ಸೇರಿದಂತೆ ದೇಶದ ಮತ್ತು ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ `ಅಸ್ಮಿತೆಗಾಗಿ ಪ್ರತಿರೋಧ' ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಚಳುವಳಿಯನ್ನು ತೀವೃಗೊಳಿಸುವ ಉದ್ದೇಶದಿಂದ ಫೆ.8 ಮತ್ತು 9ರಂದು ಮಿತ್ತೂರು ಪ್ರೀಡಂ ಕಮ್ಯುನಿಟಿ ಹಾಲ್‍ನಲ್ಲಿ ರಾಜ್ಯ ಪ್ರತಿನಿಧಿಗಳ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಾಯಿದೆ ಜಾರಿ ಮಾಡುವ ವಿಚಾರದಲ್ಲಿ ಹಿಂದೆ ಸರಿದಿಲ್ಲ. ಸರ್ಕಾರದ ಈ ಪ್ಯಾಸಿಸ್ಟ್ ಧೋರಣೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ.ಜೆ, ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ, ರಾಜ್ಯ ಕನ್ವೀನರ್ ಅನೀಸ್ ಅಹಮ್ಮದ್, ರಾಜ್ಯ ಸಮಿತಿ ಸದಸ್ಯೆ ಮುಫೀದಾ ರಹ್ಮಾನ್ ಉಪಸ್ಥಿತರಿದ್ದರು.





