ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞೆ ರಾಜೀನಾಮೆ
ವಾಶಿಂಗ್ಟನ್, ಫೆ. 6: ವಿಶ್ವಬ್ಯಾಂಕ್‌ನಿಂದ ಹೊರಹೋಗುತ್ತಿರುವುದಾಗಿ ಅದರ ಮುಖ್ಯ ಆರ್ಥಿಕ ತಜ್ಞೆ ಪಿನಲೊಪಿ ಕೌಜಿಯಾನು ಗೋಲ್ಡ್‌ಬರ್ಗ್ ಬುಧವಾರ ಘೋಷಿಸಿದ್ದಾರೆ.
‘‘ಇದು ಕಠಿಣ ನಿರ್ಧಾರ’’ ಎಂದು ತನ್ನ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿರುವ ಅವರು, ಮಾರ್ಚ್ 1ರಂದು ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದಿದ್ದಾರೆ. ಬಳಿಕ ನಾನು ಯೇಲ್ ವಿಶ್ವವಿದ್ಯಾನಿಲಯದಲ್ಲಿ ಬೋಧಿಸುವ ಹುದ್ದೆಗೆ ಮರಳುತ್ತೇನೆ ಎಂದು ಹೇಳಿದ್ದಾರೆ.
ಹೊಸ ಖಾಯಂ ಮುಖ್ಯ ಆರ್ಥಿಕ ತಜ್ಞರೊಬ್ಬರ ನೇಮಕದವರೆಗೆ ಸಂಶೋಧನಾ ನಿರ್ದೇಶಕ ಆರ್ಟ್ ಕ್ರಾಯ್, ಗೋಲ್ಡ್‌ಬರ್ಗ್‌ರ ಬಿಟ್ಟು ಹೋಗಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮ್ಯಾಲ್ಪಾಸ್ ಹೇಳಿದ್ದಾರೆ.
Next Story





