ಫಡ್ನವೀಸ್ ಸರಕಾರವು ಬಿಜೆಪಿ ನಾಯಕರ ಫೋನ್ಗಳನ್ನು ಕದ್ದಾಲಿಸಿತ್ತು: ದೇಶಮುಖ್

ಫೋಟೊ ಕೃಪೆ: twitter.com/AnilDeshmukhNCP
ಮುಂಬೈ,ಫೆ.7: ಹಿಂದಿನ ದೇವೇಂದ್ರ ಫಡ್ನವೀಸ ಅವರ ಆಡಳಿತದ ಸಂದರ್ಭದಲ್ಲಿ ಕೆಲವು ಬಿಜೆಪಿ ನಾಯಕರ ಫೋನ್ಗಳನ್ನೂ ಕದ್ದಾಲಿಸಲಾಗಿತ್ತು ಎಂಬ ಮಾಹಿತಿಯು ಮಹಾರಾಷ್ಟ್ರ ಸರಕಾರದ ಬಳಿಯಿದೆ ಮತ್ತು ಈ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ರಾಜ್ಯದ ಗೃಹಸಚಿವ ಅನಿಲ್ ದೇಶಮುಖ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳ ಸಂದರ್ಭ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರ ಫೋನ್ಗಳನ್ನು ಕದ್ದಾಲಿಸಲಾಗಿತ್ತು ಎಂಬ ದೂರುಗಳನ್ನು ದ್ವಿಸದಸ್ಯ ಸಮಿತಿಯೊಂದು ಪರಿಶೀಲಿಸುತ್ತಿದೆ ಎಂದರು. ಪಕ್ಷದೊಂದಿಗೆ ಮುನಿಸಿಕೊಂಡಿರುವ ಬಿಜೆಪಿ ನಾಯಕ ಏಕನಾಥ ಖಡ್ಸೆ ಅವರು ಗುರುವಾರ ಫೋನ್ ಕದ್ದಾಲಿಕೆ ಆರೋಪಗಳ ಕುರಿತು ಸರಕಾರದ ತನಿಖೆಯನ್ನು ಸ್ವಾಗತಿಸಿದ್ದರು. ಆದರೆ ಹಿಂದಿನ ಬಿಜೆಪಿ-ಶಿವಸೇನೆ ಸರಕಾರದಿಂದ ತನ್ನ ಫೋನ್ ಕದ್ದಾಲಿಕೆ ನಡೆದಿತ್ತು ಎಂದು ತಾನು ಭಾವಿಸಿಲ್ಲ ಎಂದು ಹೇಳಿದ್ದರು.
ಫೋನ್ ಕದ್ದಾಲಿಕೆ ಆರೋಪವನ್ನು ಬಿಜೆಪಿ ಮತ್ತು ಫಡ್ನವೀಸ್ ನಿರಾಕರಿಸಿದ್ದಾರೆ.
Next Story





