ಸೌದಿ ನಿವಾಸಿಗಳಿಗೆ ಚೀನಾ ಪ್ರವಾಸ ನಿಷೇಧ, ದಂಡ

ರಿಯಾದ್ (ಸೌದಿ ಅರೇಬಿಯ), ಫೆ. 7: ತನ್ನ ನಾಗರಿಕರು ಮತ್ತು ದೇಶದಲ್ಲಿ ವಾಸಿಸುತ್ತಿರುವ ವಿದೇಶಿಯರು ಕೊರೋನವೈರಸ್ ಪೀಡಿತ ಚೀನಾಕ್ಕೆ ಭೇಟಿ ನೀಡುವುದನ್ನು ಸೌದಿ ಅರೇಬಿಯ ನಿಷೇಧಿಸಿದೆ ಹಾಗೂ ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯದ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಈ ನಿಯಮವನ್ನು ಉಲ್ಲಂಘಿಸುವ ವಿದೇಶಿಯರು ಸೌದಿ ಅರೇಬಿಯಕ್ಕೆ ವಾಪಸಾಗುವುದರಿಂದ ನಿಷೇಧಿಸಲ್ಪಡುವ ಕ್ರಮವನ್ನು ಎದುರಿಸುತ್ತಾರೆ ಎಂದು ಅಧಿಕೃತ ಸೌದಿ ಪ್ರೆಸ್ ಏಜನ್ಸಿ ಹೇಳಿದೆ.
Next Story





