ಪ್ರವಾಸಿ ಹಡಗಿನಲ್ಲಿ 61 ಮಂದಿಗೆ ಕೊರೊನಾ ವೈರಸ್ ಸೋಂಕು!

(ಜಪಾನ್), ಫೆ. 7: ಜಪಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಪ್ರವಾಸಿ ಹಡಗಿನಲ್ಲಿರುವ ಪ್ರವಾಸಿಗರ ಪೈಕಿ ಇನ್ನೂ 41 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕಟೊ ಶುಕ್ರವಾರ ತಿಳಿಸಿದ್ದಾರೆ.
ಇದರೊಂದಿಗೆ ಹಡಗಿನಲ್ಲಿರುವ ಕೊರೋನವೈರಸ್ ಸೋಂಕು ಪೀಡಿತರ ಸಂಖ್ಯೆ ಕನಿಷ್ಠ 61ಕ್ಕೇರಿದೆ ಎಂದು ಸಚಿವರು ಹೇಳಿದರು.‘ಡೈಮಂಡ್ ಪ್ರಿನ್ಸೆಸ್’ ಹಡಗಿನಿಂದ ಕಳೆದ ತಿಂಗಳು ಇಳಿದ ಪ್ರವಾಸಿಯೊಬ್ಬರಲ್ಲಿ ಸೋಂಕು ಇರುವುದು ಪತ್ತೆಯಾದ ಬಳಿಕ ಹಡಗನ್ನು ಈಗ ಪ್ರತ್ಯೇಕಿಸಲಾಗಿದೆ. ಹಡಗಿನಲ್ಲಿರುವ 3,700ಕ್ಕೂ ಅಧಿಕ ಪ್ರವಾಸಿಗರ ಪೈಕಿ 273 ಮಂದಿಯನ್ನು ಪರೀಕ್ಷಿಸಲಾಗಿದೆ.
171 ಮಂದಿಯ ಫಲಿತಾಂಶ ಬಂದಿದ್ದು, 41 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಟೊ ನುಡಿದರು. ‘‘ಒಟ್ಟು 273 ಪರೀಕ್ಷೆಗಳಲ್ಲಿ 61 ಮಂದಿಯಲ್ಲಿ ಸೋಂಕಿರುವುದು ಪತ್ತೆಯಾಗಿದೆ’’ ಎಂದರು.
Next Story





