ನಂದರಬೆಟ್ಟು: ಎಸ್.ವೈ.ಎಸ್. ಅಧ್ಯಕ್ಷರಾಗಿ ಟಿ.ಎಂ.ಹನೀಫ್ ಮುಸ್ಲಿಯಾರ್ ನಂದರಬೆಟ್ಟು ಆಯ್ಕೆ

ವಿಟ್ಲ, ಫೆ.8: ಎಸ್.ವೈ.ಎಸ್. ನಂದರಬೆಟ್ಟು ಶಾಖಾ ಅದ್ಯಕ್ಷರಾಗಿ ಟಿ.ಎಂ. ಹನೀಫ್ ಮುಸ್ಲಿಯಾರ್ ನಂದರಬೆಟ್ಟು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಂದರಬೆಟ್ಟು ಅನ್ಸಾರಿಯ ಇಸ್ಲಾಮಿಕ್ ಮದ್ರಸದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮದೀನ ಮಸ್ಜಿದ್ ಹಾಗೂ ಅನ್ಸಾರಿಯ ಇಸ್ಲಾಮಿಕ್ ಮದ್ರಸದ ಆಡಳಿತ ಕಮಿಟಿಯ ಅಧ್ಯಕ್ಷ ಎಸ್.ಎ.ಅಬ್ದುರ್ರಝಾಕ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಮದೀನ ಮಸ್ಜಿದ್ ಇಮಾಂ ಫಕ್ರುದ್ದಿನ್ ದಾರಿಮಿ ಉದ್ಘಾಟಿಸಿದರು.
ಪರ್ಲಿಯ ಮಸ್ಜಿದ್ ಖತೀಬ್ ತ್ವಯಿಬ್ ಫೈಝಿ, ಅನ್ಸಾರುಲ್ ಇಸ್ಲಾಮಿಕ್ ಮದ್ರಸ ಸದರ್ ಮುಅಲ್ಲಿಂ ಶರೀಫ್ ದಾರಿಮಿ ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರಾಗಿ ಭಾಗವಹಿಸಿದ್ದ ಮಿತ್ತಬೈಲ್ ವಲಯ ಸಮಿತಿಯ ಬಶೀರ್ ಮಜಲ್ ಹಾಗೂ ಫಾರೂಕ್ ಕೊಡಿಮಜಲ್ 2020 - 2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷರಾಗಿ ಟಿ.ಮುಹಮ್ಮದ್ ಇಕ್ಬಾಲ್ ಹನೀಫಿ ಹಾಗೂ ಅಹ್ಮದ್ ಕುಂಞ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ನಂದರಬೆಟ್ಟು, ಕಾರ್ಯದರ್ಶಿಗಳಾಗಿ ಇಕ್ಬಾಲ್ ಹಾಗೂ ಮುಹಮ್ಮದ್ ಪಿಕಪ್, ಕೋಶಾಧಿಕಾರಿಯಾಗಿ ಎನ್.ಎ.ರಝಾಕ್ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೌಶಾದ್, ಎನ್.ಬಿ.ಅನ್ಸಾರ್, ನೌಫಲ್ ಹುದವಿ, ಅಯ್ಯೂಬ್, ಹಮೀದ್ ಮೇಸ್ತ್ರಿ, ಅಹ್ಮದ್ ಬಾವ, ಅಬ್ದುರ್ರಝಾಕ್ ಎಸ್.ಎ. ಹಾಗೂ ಸುಲೈಮಾನ್ ಅವರನ್ನು ಆರಿಸಲಾಯಿತು.