ಪೌರತ್ವ ಪರೀಕ್ಷೆ ಡಿಎನ್‌ಎ ಆಧಾರದಲ್ಲಿ ಆಗಲಿ: ಪ್ರೊ.ವಿಲಾಸ್ ಖಾರತ್
ಹಾಸನದಲ್ಲಿ ಸಿಎಎ ವಿರೋಧಿ ಬೃಹತ್ ಪ್ರತಿಭಟನಾ ಸಮಾವೇಶ

ಹಾಸನ, ಫೆ.8: ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಸಂಘಟನೆಯ ಆಶ್ರಯದಲ್ಲಿ ಕೇಂದ್ರ ಸರಕಾರದ ಸಂವಿಧಾನ ವಿರೋಧಿ, ಜನ ವಿರೋಧಿ, ಧರ್ಮಾಧಾರಿತ ತಾರತಮ್ಯದ ಪೌರತ್ವ ಕಾಯ್ದೆ ವಿರುದ್ಧ ನಗರದ ಎ.ಪಿ.ಜೆ.ಅಬ್ದುಲ್ ಕಲಾಂ ರಸ್ತೆಯ ಹೊಸ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಶನಿವಾರ ನಡೆಯಿತು
ರಾಷ್ಟ್ರೀಯ ಬಹುಜನ ಕ್ರಾಂತಿ ಮೋರ್ಚಾ ಅಧ್ಯಕ್ಷ ಪ್ರೊ.ವಿಲಾಸ್ ಖಾರತ್ ಮಾತನಾಡಿ, ಪೌರತ್ವ ಪರೀಕ್ಷೆ ಡಿಎನ್‌ಎ ಆದಾರದ ಮೇಲೆ ನಡೆಯಲಿ. ನಾವು ನಮ್ಮ ಡಿಎನ್‌ಎ ಪರಿಕ್ಷೆಗೆ ಸಿದ್ಧರಿದ್ದೇವೆ. ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ್ ಸಹ ಡಿಎನ್‌ಎ ಪರೀಕ್ಷೆ ಮಾಡಿಸಲಿ. ಯಾರ ಡಿಎನ್ ಎ ಈ ದೇಶದ ಜನರ ಡಿಎನ್‌ಎಗೆ ಹೋಲಿಕೆಯಾಗುತ್ತಯೋ ಅವರಿಗೆ ಪೌರತ್ವ ನೀಡಲಿ ಎಂದರು
ನಮಗೆ ನಂಬಿಕೆ ಇದೆ ನಮ್ಮ ಡಿಎನ್‌ಎ ಈ ದೇಶದ ಎಸ್ಸಿ-ಎಸ್ಟಿ, ಒಬಿಸಿ, ಲಿಂಗಾಯತ, ಒಕ್ಕಲಿಗರ ಡಿಎನ್‌ಎಗೆ ಹೋಲಿಕೆ ಯಾಗುತ್ತದೆ. ಆದರೆ ಮೋಹನ್ ಭಾಗವತ್ ಅವರ ಡಿಎನ್‌ಎ ಇಸ್ರೇಲ್ ಹಾಗೂ ಮದ್ಯ ಏಶ್ಯದ ಜನರಿಗೆ ಹೋಲಿಕೆಯಾಗುತ್ತದೆ ಎಂದರು.
ಖ್ಯಾತ ವಕೀಲ ಎಸ್.ಬಾಲಕೃಷ್ಣನ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರವು ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಹಿಟ್ಲರ್‌ನ ಆಡಳಿತದ ಪ್ರಥಮ ನಡೆಯಾಗಿದೆ. ಪ್ರಜಾಪ್ರಭುತ್ವ ಅಳಿಸಿ ಸಂವಿಧಾನದ ಬದಲಿಸಿ ಮನು ಸ್ಮತಿ ಜಾರಿಗೆ ತರಲು ಆರೆಸ್ಸೆಸ್ ತೆರೆಮರೆ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.






.gif)
.gif)
.gif)
.gif)
.gif)
.gif)
.gif)

