ಕೊರೋನವೈರಸ್: ಸಾವಿನ ಸಂಖ್ಯೆ 722ಕ್ಕೆ ಏರಿಕೆ
ಬೀಜಿಂಗ್, ಫೆ. 8: ಚೀನಾದ ಭೀಕರ ಕೊರೋನವೈರಸ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಶನಿವಾರ 722ಕ್ಕೆ ಏರಿದೆ. ಇದು 2003ರಲ್ಲಿ ಚೀನಾ ಮತ್ತು ಹಾಂಕಾಂಗ್ನಲ್ಲಿ ಸಾರ್ಸ್ ರೋಗದಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ಮೀರಿಸಿದೆ.
ಒಂದು ದಿನದ ಅವಧಿಯಲ್ಲಿ ಚೀನಾದಲ್ಲಿ ಹೊಸದಾಗಿ 86 ಮಂದಿ ಕೊರೋನವೈರಸ್ಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಈ ಪೈಕಿ 81 ಸಾವುಗಳು ಅತ್ಯಂತ ಪೀಡಿತ ಹುಬೈ ಪ್ರಾಂತವೊಂದರಲ್ಲೇ ಸಂಭವಿಸಿವೆ.
ಅದೇ ವೇಳೆ, ಒಂದು ದಿನದಲ್ಲಿ ಹೊಸದಾಗಿ 3,399 ಸೋಂಕು ಪ್ರಕರಣಗಳು ಖಚಿತಪಟ್ಟಿವೆ ಎಂದು ತನ್ನ ದೈನಂದಿನ ಮಾಹಿತಿಯಲ್ಲಿ ಆಯೋಗ ತಿಳಿಸಿದೆ. ಇದರೊಂದಿಗೆ, ಚೀನಾದಲ್ಲಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 34,500ನ್ನೂ ಮೀರಿದೆ.
2002-03ರಲ್ಲಿ ಮಾತೃಭೂಮಿ ಚೀನಾ ಮತ್ತು ಹಾಂಕಾಂಗ್ನಲ್ಲಿ ಸಾರ್ಸ್ನಿಂದಾಗಿ ಸುಮಾರು 650 ಮಂದಿ ಮೃತಪಟ್ಟಿದ್ದಾರೆ. ಸಾರ್ಸ್ಗೆ ಕಾರಣವಾಗುವ ವೈರಸ್ ಮತ್ತು ನೂತನ ಕೊರೋನವೈರಸ್ ಒಂದೇ ಕುಟುಂಬಕ್ಕೆ ಸೇರಿವೆ.
ಜಗತ್ತಿನಾದ್ಯಂತ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.