ತೆಂಕನಿಡಿಯೂರು ಕಾಲೇಜು: ರಕ್ಷಕ-ಶಿಕ್ಷಕ ಸಮಾವೇಶ

ಉಡುಪಿ, ಫೆ.8: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ರಕ್ಷಕ ಶಿಕ್ಷಕ ಸಮಾವೇಶ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಪೋಷಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ ಹಾಗೂ ವಾಹನಗಳನ್ನು ಸರಿಯಾದ ಉದ್ದೇಶಕ್ಕೆ ಹಿತ ಮಿತವಾಗಿ ಬಳಸುವಂತೆ ಹೆತ್ತವರು ನೋಡಿಕೊಳ್ಳಬೇಕು. ಪದವಿ ಹಂತದ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು ಮತ್ತು ಪರೀಕ್ಷೆಗಳಿಗೆ ಪೂರಕವಾದ ಪುಸ್ತಕಗಳನ್ನು ಓದಲು ಸಹಕರಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಪೋಷಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ ಹಾಗೂ ವಾಹನಗಳನ್ನು ಸರಿಯಾದ ಉದ್ದೇಶಕ್ಕೆ ಹಿತ ಮಿತವಾಗಿ ಬಳಸುವಂತೆ ಹೆತ್ತವರು ನೋಡಿಕೊಳ್ಳಬೇಕು. ಪದವಿ ಹಂತದ ವಿದ್ಯಾರ್ಥಿಗಳು ವಿವಿರ್ಸ್ಪಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು ಮತ್ತು ಪರೀಕ್ಷೆಗಳಿಗೆ ಪೂರಕವಾದ ಪುಸ್ತಕಗಳನ್ನು ಓದಲು ಸಹಕರಿಸಬೇಕು ಎಂದರು. ಇಂದಿನ ಕಾಲಘಟ್ಟದಲ್ಲಿ ಮಕ್ಕಳನ್ನು ಮಿತ್ರರಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ರಾಜಕೀಯ ಸೆಳೆತಗಳಿಗೆ ಒಳಗಾಗದೆ ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಯುವಂತೆ ಹೆತ್ತವರು ನಿಗಾ ವಹಿಸಬೇಕು ಎಂದವರು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಮಕ್ಕಳನ್ನು ಮಿತ್ರರಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ರಾಜಕೀಯ ಸೆಳೆತಗಳಿಗೆ ಒಳಗಾಗದೆ ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಯುವಂತೆ ಹೆತ್ತವರು ನಿಗಾ ವಹಿಸಬೇಕು ಎಂದವರು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ನಿರಂತರವಾಗಿ ಕಾಲೇಜಿನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡರೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖವಾದ ಪಾತ್ರ ವಹಿಸಿದಂತಾಗುತ್ತದೆ. ಮಕ್ಕಳ ಶೈಕ್ಷಣಿಕ ಜೀವನವನ್ನು ಪರಿಣಾಮಕಾರಿ ಯನ್ನಾಗಿಸಲು ಪೋಷಕರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕು ಎಂದರು.
2020-2021ನೇ ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕೆ. ಶಿವಾನಂದ ವೈದ್ಯ, ಉಪಾಧ್ಯಕ್ಷರಾಗಿ ಬಿ.ಸರಳ ವಿನೋದ್, ಜಂಟಿ ಕಾರ್ಯದಶಿಯಾರ್ಗಿ ಯೋಗೀಶ್ ಗಾಣಿಗ ಆಯ್ಕೆಯಾದರು.
ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಕೆ, ರಾಘವೇಂದ್ರ, ಜ್ಯೋತಿ ಆಚಾರ್ಯ ಹಾಗೂ ಬಾಸ್ಕರ ಉಪಸ್ಥಿತರಿದ್ದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಪ್ರೊ. ಉಮೇಶ್ ಪೈ ಸ್ವಾಗತಿಸಿದರು. ಪ್ರೊ.ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದರು.







