ಎಸ್ಸೆಸ್ಸೆಫ್ ಕೊಟೇಪುರ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ

ಉಳ್ಳಾಲ: ಎಸ್ಸೆಸ್ಸೆಫ್ ಕೊಟೇಪುರ ಶಾಖೆ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ನಡೆಯಿತು. ನೂತನ ಸಮಿತಿ ಅಧ್ಯಕ್ಷರಾಗಿ ಇರ್ಫಾನ್ ಕೊಟೇಪುರ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಸಾಹಿಲ್ ಕೊಟೇಪುರ, ಫೈನಾನ್ಸ್ ಕಾರ್ಯದರ್ಶಿಯಾಗಿ ಫೈಝಲ್ ಕೊಟೇಪುರ, ಉಪಾಧ್ಯಕ್ಷರಾಗಿ ಹಸೈನಾರ್ ಕೊಟೇಪುರ ಜೊತೆ ಕಾರ್ಯದರ್ಶಿಯಾಗಿ ಫೈಝಲ್ ಬಿನ್ ಫಾರೂಕ್ ಹಾಜಿ ಕೊಟೇಪುರ ಅವರು ಆಯ್ಕೆಯಾದರು.
ವೀಕ್ಷಕರಾಗಿ ಮುಝಮ್ಮಿಲ್ ಮದನಿ ಕೊಟೇಪುರ ಆಗಮಿಸಿ ತರಗತಿ ನಡೆಸಿಕೊಟ್ಟರು. ಸೆಕ್ಟರ್ ನಾಯಕ ಮುಝಮ್ಮಿಲ್ ಕೊಟೇಪುರ ಹಾಜರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಜಾವೀದ್ ಸ್ವಾಗತಿಸಿ, ನಿರೂಪಿಸಿದರು.
Next Story





