ಗಾಂಜಾ ಮಾರಾಟ: ಮೂವರು ವಿದ್ಯಾರ್ಥಿಗಳ ಬಂಧನ
ಮಣಿಪಾಲ, ಫೆ.8: ಮಣ್ಣಪಳ್ಳ ಕೆರೆಯ ನಿರ್ಮಿತಿ ಕೇಂದ್ರ ಗೇಟ್ ಬಳಿ ಫೆ.7 ರಂದು ಗಾಂಜಾ ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ವರ್ಮಾ(19), ಕಮಲಪಲ್ಲಿ ಸಾಯಿ ನಿಶಾಂತ್ ರೆಡ್ಡಿ(19), ರಾಜ್ ಪಾಟಿಲ್(21) ಬಂಧಿತ ಆರೋಪಿಗಳು. ಇವರಿಂದ 17ಸಾವಿರ ರೂ. ಮೌಲ್ಯದ 731 ಗ್ರಾಂ ಗಾಂಜಾ, 200ರೂ. ನಗದು, ಬಿಳಿ ಬಣ್ಣ ಡಿಜಿಟಲ್ ತೂಕದ ಮಿಶೀನ್ ಹಾಗೂ ಬ್ಯಾಗ್‌ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





