ಸಮುದ್ರದಲ್ಲಿ ಬೋಟಿನೊಳಗೆ ಮೀನುಗಾರ ಮೃತ್ಯು
ಮಲ್ಪೆ, ಫೆ.8: ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಬೋಟಿನೊಳಗೆ ಮೀನುಗಾರರೊಬ್ಬರು ಅಸ್ವಸ್ಥರಾಗಿ ಮೃತಪಟ್ಟ ಘಟನೆ ಫೆ.7ರಂದು ನಡೆದಿದೆ.
ಮೃತರನ್ನು ಆಂಧ್ರಪ್ರದೇಶದ ನಂದು ಪಿಳ್ಳಿ ಜೋಗಿರಾಜ್(34) ಎಂದು ಗುರುತಿಸಲಾಗಿದೆ. ಇವರು ಇತರೆ ಮೀನುಗಾರರೊಂದಿಗೆ ಸುರೇಶ ಸುವರ್ಣ ಎಂಬವರ ಅಶ್ವಾರೋಢ ಎಂಬ ಆಳಸಮುದ್ರ ಮೀನುಗಾರಿಕೆ ಬೋಟಿನಲ್ಲಿ ಫೆ.4ರಂದು ಮಲ್ಪೆಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಫೆ.6ರಂದು ರಾತ್ರಿ ವೇಳೆ 40 ರಿಂದ 45 ಮಾರು ಆಳ ಸಮುದ್ರದಲ್ಲಿ ಬೋಟಿನಲ್ಲಿ ಬಲೆ ಯನ್ನು ಎಳೆಯುತ್ತಿದ್ದ ನಂದು ತೀವ್ರ ಅಸ್ವಸ್ಥಗೊಂಡರೆನ್ನಲಾಗಿದೆ.
ಕೂಡಲೇ ಅವರನ್ನು ಅದೇ ಬೋಟಿನಲ್ಲಿ ಮಲ್ಪೆ ಬಂದರಿಗೆ ಕರೆದುಕೊಂಡು ಬರುವಾಗ ಸಮುದ್ರ ಮಧ್ಯೆ ಬೋಟಿನೊಳಗೆ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story