ಮಂಗಳೂರು: ಯುನೈಟೆಡ್ ಮರೈನ್ ಪ್ರೊಡಕ್ಟ್ಸ್ ಸಂಸ್ಥೆಗೆ 'ಅತ್ಯುತ್ತಮ ರಫ್ತುದಾರ' ಸಂಸ್ಥೆ ಪ್ರಶಸ್ತಿ

ಮಂಗಳೂರು, ಫೆ.8: ಸಾಗರೋತ್ಪನ್ನ ರಫ್ತು ವಹಿವಾಟಿನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ (ಎಂಪಿಇಡಿಎ) ಮಂಗಳೂರಿನ ಯುನೈಟೆಡ್ ಮರೈನ್ ಪ್ರೊಡಕ್ಟ್ಸ್ ಸಂಸ್ಥೆಗೆ ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರವು 2017-18ನೆ ಸಾಲಿನ ಅತ್ಯುತ್ತಮ ರಫ್ತುದಾರ ಸಂಸ್ಥೆಯೆಂದು ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಸಂಸ್ಥೆಗೆ 2018-19ನೆ ಸಾಲಿನಲ್ಲಿ ಮೀನಿನ ಉತ್ಪನ್ನ ,ಮೀನಿನ ಎಣ್ಣೆ ಹಾಗೂ ಇತರ ಉತ್ಪನ್ನಗಳ ರಪ್ತು ವಿಭಾಗದಲ್ಲಿ ಎರಡನೇ ಅತ್ಯುತ್ತಮ ರಫ್ತುದಾರ ಸಂಸ್ಥೆಯೆಂದು ಕೇಂದ್ರ ಸರಕಾರ ಪ್ರಶಸ್ತಿ ನೀಡಿದ್ದು, ಕೊಚ್ಚಿಯ ಗ್ರಾಂಡ್ ಹ್ಯಾಟ್ ಲುಲು ಕನ್ವೆಂಶನ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್, ಕೇರಳ ಸರಕಾರದ ಮೀನುಗಾರಿಕಾ ಸಚಿವೆ ಕುಟ್ಟಿ ಅಮ್ಮ ಅವರ ಉಪಸ್ಥಿತಿಯಲ್ಲಿ ಯುನೈಟೆಡ್ ಮರೈನ್ ಪ್ರೊಡಕ್ಟ್ಸ್ ಸಂಸ್ಥೆಯ ಆಡಳಿತ ಪಾಲುದಾರ ಮುಹಮ್ಮದ್ ಸಮೀರ್ ಪ್ರಶಸ್ತಿ ಸ್ವೀಕರಿಸಿದರು.
Next Story





