ಎನ್ ಆರ್ ಸಿ ಮಾಡಿದರೆ ಎಷ್ಟು ಮಂದಿ ಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ : ಶಿವಸುಂದರ
ವಿ ದಿ ಪೀಪಲ್ ಆಫ್ ಇಂಡಿಯಾ ವತಿಯಿಂದ ಕಾರ್ಯಾಗಾರ

ಉಳ್ಳಾಲ: ಎನ್ ಆರ್ ಸಿ ಮಾಡಿದರೆ ಎಷ್ಟು ಮಂದಿಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಸ್ಸಾಂನಲ್ಲಿ ಮಾಡಿದ ಎನ್ ಆರ್ ಸಿ ಯಲ್ಲಿ ದೊರೆತ ಫಲಿತಾಂಶ ಇದಕ್ಕೆ ಉದಾಹರಣೆಯಾಗಿದೆ. ಪೌರತ್ವ ಸಾಬೀತು ಪಡಿಸಲು ರೇಶನ್ ಕಾರ್ಡ್, ಆಧಾರ್ ಕಾರ್ಡ್ ಪುರಾವೆ ಆಗುವುದಿಲ್ಲ. ಇದನ್ನು ಕೋರ್ಟ್ ಕೂಡ ಹೇಳಿದ್ದು, ಜನನ ಪ್ರಮಾಣ ಪತ್ರ ಆಗುತ್ತದೆ ಯಾದರೂ 1980ರಲ್ಲಿ ಜನನ ಪ್ರಮಾಣ ಪತ್ರ ಇರಲಿಲ್ಲ. ಈ ಇಸವಿಯ ಮೊದಲು ಜನಿಸಿದವರು ಪ್ರಮಾಣ ಪತ್ರ ಎಲ್ಲಿಂದ ನೀಡಬೇಕು ? ದಾಖಲೆ ಇಲ್ಲದವರು ವಲಸಿಗರು ಎಂದು ಸರ್ಕಾರದ ಲೆಕ್ಕಾಚಾರ. ಆದರೆ ಅವರಿಗೆ ಬದುಕುವ ದಾರಿ ಎಲ್ಲಿದೆ ? ಅವರನ್ನು ಬಾಂಗ್ಲಾದೇಶ ಕಳುಹಿಸಿಕೊಟ್ಟರೆ ಅವರು ಒಪ್ಪಲು ತಯಾರಿದ್ದಾರಾ ? ಎಂದು ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ ಸವಾಲು ಪ್ರಶ್ನಿಸಿದ್ದಾರೆ.
ಅವರು ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ ಶನಿವಾರ ವಿ ದಿ ಪೀಪಲ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಯು ಸಾಧಕ ಬಾಧಕಗಳು ಕಾರ್ಯಾಗಾರ ದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗಿದೆ. ಜನ ಜೀವನ ಸಂಕಷ್ಟದಲ್ಲಿದೆ. ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಹೊಸ ಸಂವಿಧಾನ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಹೊಸ ಸಂವಿಧಾನ ಒಪ್ಪಲು ಜನರು ಮಾತ್ರ ತಯಾರಿಲ್ಲ. ನಾವು ಕಾನೂನು ಬದ್ಧ ವಾಗಿ ನ್ಯಾಯ ಕೇಳುತ್ತೇವೆ. ಸರ್ಕಾರ ಕಾನೂನು ಬಾಹಿರವಾಗಿ ಏನನ್ನು ಮಾಡಬಹುದು. ಪಾಕ್ ನಲ್ಲಿ ನಾಲ್ಕನೇ ಸಂವಿಧಾನ ಇದೆ, ಬಾಂಗ್ಲಾದೇಶ ದಲ್ಲಿ ಆರನೇ ಸಂವಿಧಾನ ಇದೆ. ಭಾರತದಲ್ಲಿ ಎರಡನೇ ಸಂವಿಧಾನ ಜಾರಿಯಾಗಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದರು.
ವೇದಿಕೆಯಲ್ಲಿ ನ್ಯಾಯವಾದಿ ಪುನೀತ್, ಜಮಾಅತ್ ಇಸ್ಲಾಮಿ ಹಿಂದ್ ಉಳ್ಳಾಲ ವಲಯ ಉಪಾಧ್ಯಕ್ಷ ಅಬ್ದುಲ್ ರಹೀಂ ಉಪಸ್ಥಿತರಿದ್ದರು.
ಯುಎಚ್ ಉಮ್ಮರ್ ಸ್ವಾಗತಿಸಿದರು.








