ಹಿಂಸಾಚಾರ, ಅಪರಾಧ ಪ್ರಚೋದಿಸುವ ‘ಶೂಟರ್’ ಚಿತ್ರ ನಿಷೇಧಿಸಿದ ಪಂಜಾಬ್ ಸರಕಾರ

ಚಂಡೀಗಡ, ಫೆ.9: ಗ್ಯಾಂಗ್‌ಸ್ಟರ್ ಸುಖಾ ಕಾಹ್ಲವಾನ್ ಜೀವನಾಧರಿತ, ಹಿಂಸಾಚಾರ, ಘೋರ ಅಪರಾಧ, ಸುಲಿಗೆ, ಬೆದರಿಕೆಗಳು ಹಾಗೂ ಕ್ರಿಮಿನಲ್ ಬೆದರಿಕೆಯನ್ನು ಪ್ರಚೋದಿಸುವ 'ಶೂಟರ್' ಚಲನಚಿತ್ರವನ್ನು ನಿಷೇಧಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ ಎಂದು ಸರಕಾರ ರವಿವಾರ ತಿಳಿಸಿದೆ.
ಚಿತ್ರ ನಿರ್ಮಾಪಕರ ಪೈಕಿ ಒಬ್ಬರಾಗಿರುವ ಕೆ.ವಿ. ದಿಲ್ಲೋನ್ ವಿರುದ್ಧ ಕ್ರಮಗೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುವಂತೆಯೂ ಮುಖ್ಯಮಂತ್ರಿ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾರಿಗೆ ಆದೇಶ ನೀಡಿದ್ದಾರೆ. ಸಿನೆಮಾದ ಪ್ರೋತ್ಸಾಹಕರು, ನಿರ್ದೇಶಕರು ಹಾಗೂ ನಟರುಗಳ ಪಾತ್ರಗಳತ್ತ ಗಮನ ನೀಡುವಂತೆಯೂ ಡಿಜಿಪಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
Next Story





