ಸ್ಥಿರಗೊಂಡಂತೆ ಕಾಣುವ ಕೊರೋನವೈರಸ್: ವಿಶ್ವ ಆರೋಗ್ಯ ಸಂಸ್ಥೆ
ಜಿನೀವ (ಸ್ವಿಟ್ಸರ್ಲ್ಯಾಂಡ್), ಫೆ. 9: ಕಳೆದ ನಾಲ್ಕು ದಿನಗಳ ಕೊರೋನವೈರಸ್ ಸಂಬಂಧಿ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಮಾರಕ ರೋಗವು ಸ್ಥಿರಗೊಂಡಂತೆ ಕಾಣುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಈ ವಿಷಯದಲ್ಲಿ ಈಗಲೇ ಯಾವುದೇ ಭವಿಷ್ಯ ಹೇಳಲು ಸಾಧ್ಯವಿಲ್ಲ ಹಾಗೂ ಅಂಕಿಸಂಖ್ಯೆಗಳು ಇನ್ನೂ ಹೆಚ್ಚಬಹುದು ಎಂದು ಅದು ಎಚ್ಚರಿಸಿದೆ.
ಸೊಂಕು ಹರಡುವಿಕೆಯ ‘ಸ್ಥಿರ ಅವಧಿ’ಯು, ಜಾರಿಯಲ್ಲಿರುವ ನಿಯಂತ್ರಣ ಕ್ರಮಗಳ ಪರಿಣಾಮವನ್ನು ಸೂಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತುಸ್ಥಿತಿಗಳ ಕಾರ್ಯಕ್ರಮದ ಮುಖ್ಯಸ್ಥ ಮೈಕಲ್ ರಯಾನ್ ಹೇಳಿದರು.
Next Story