ನೀರಿನ ತೋಡಿಗೆ ಬಿದ್ದು ಮಹಿಳೆ ಮೃತ್ಯು
ಅಜೆಕಾರು, ಫೆ. 9: ಬಟ್ಟೆ ತೊಳೆಯಲು ಮನೆ ಸಮೀಪದ ತೋಡಿಗೆ ಹೋಗಿದ್ದ ಮಹಿಳೆಯೊಬ್ಬರು ರಕ್ತಸ್ರಾವದಿಂದ ತೀವ್ರ ನಿತ್ರಾಣಗೊಂಡು ನೀರಿನ ತೋಡಿನಲ್ಲಿ ಬಿದ್ದು ಮೃತಪಟ್ಟ ಘಟನೆ ಫೆ.8ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಸುಶೀಲಾ (34) ಎಂದು ಗುರುತಿಸಲಾಗಿದೆ. ಗರ್ಭಪಾತಕ್ಕೆ ಒಳಗಾಗಿದ್ದ ಇವರು, ಮನೆ ಸಮೀಪದ ಬಟ್ಟೆ ತೊಳೆಯಲು ಮತ್ತು ಸ್ನಾನ ಮಾಡಲೆಂದು ತೆರಳಿದ್ದರು. ಅಲ್ಲಿ ರಕ್ತಸ್ರಾವವಾಗಿ ತೀವ್ರ ನಿತ್ರಾಣಗೊಂಡು ನೀರಿನ ತೋಡಿನಲ್ಲಿ ಬಿದ್ದು ಅವರು ಮೃತಪಟ್ಟರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





