ಕೊರೋನಾವೈರಸ್ ಸುಲಭವಾಗಿ ಹರಡಬಹುದಾದ ದೇಶಗಳಲ್ಲಿ ಭಾರತವೂ ಒಂದು!
ಅಧ್ಯಯನ ವರದಿ

ಫೈಲ್ ಚಿತ್ರ
ಹೊಸದಿಲ್ಲಿ, ಫೆ. 9: ನೂತನ ಕೊರೋನಾವೈರಸ್ ಹರಡುವ ಭೀತಿಯನ್ನು ಎದುರಿಸುತ್ತಿರುವ 20 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಜರ್ಮನಿಯ ಹಮ್ಬೋಲ್ಟ್ ವಿಶ್ವವಿದ್ಯಾನಿಲಯ ಮತ್ತು ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ನಡೆಸಿರುವ ಅಧ್ಯಯನವೊಂದು ತಿಳಿಸಿದೆ.
ನೂತನ ಕೊರೋನವೈರಸ್ ಜಾಗತಿಕವಾಗಿ ಹರಡುವ ಸಾಧ್ಯತೆಯನ್ನು ಬಿಂಬಿಸುವ ಗಣಿತ ಮಾದರಿಯಲ್ಲಿ, ಸುಲಭವಾಗಿ ರೋಗ ಹರಡುವ ದೇಶಗಳ ಪಟ್ಟಿಯಲ್ಲಿ ಭಾರತ 17ನೇ ಸ್ಥಾನದಲ್ಲಿದೆ ಎಂದು ಅಧ್ಯಯನ ತಿಳಿಸಿದೆ.
ವಿಶ್ವಾದ್ಯಂತವಿರುವ 4,000 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಸಂಚಾರ ವ್ಯವಸ್ಥೆ ಮತ್ತು ಅವುಗಳ ನಡುವಿನ 25,000ಕ್ಕೂ ಅಧಿಕ ನೇರ ಸಂಪರ್ಕಗಳ ವಿಶ್ಲೇಷಣೆ ಮೂಲಕ ಮಾಡಲಾದ ಅಧ್ಯಯನ ಇದಾಗಿದೆ. ಅದರ ಆಧಾರದಲ್ಲಿ ಈ ರೋಗವನ್ನು ಭಾರತ ಆಮದು ಮಾಡಿಕೊಳ್ಳುವ ಅಪಾಯ ಸಾಧ್ಯತೆಯು 0.219 ಶೇಕಡವಾಗಿದೆ.
Next Story





