ಇರಾನ್: ಉಪಗ್ರಹ ಉಡಾವಣೆ; ಆದರೆ ಕಕ್ಷೆಗೆ ಸೇರಲು ವಿಫಲ
ಟೆಹರಾನ್ (ಇರಾನ್), ಫೆ. 10: ತಾನು ಉಪಗ್ರಹವೊಂದನ್ನು ‘ಯಶಸ್ವಿಯಾಗಿ’ ಉಡಾಯಿಸಿದ್ದೇನೆ, ಆದರೆ ಅದನ್ನು ಕಕ್ಷೆಗೆ ಸೇರಿಸಲು ಸಾಧ್ಯವಾಗಿಲ್ಲ ಎಂದು ಇರಾನ್ ಹೇಳಿದೆ. ಇದರಿಂದಾಗಿ ಇರಾನ್‌ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.
ಆದರೆ, ಇರಾನ್‌ನ ಬಾಹ್ಯಾಕಾಶ ಕಾರ್ಯಕ್ರಮವು ಆ ದೇಶದ ಕ್ಷಿಪಣಿ ಅಭಿವೃದ್ಧಿಗಾಗಿ ಮಾಡಿದ ಪರೋಕ್ಷ ವ್ಯವಸ್ಥೆಯಾಗಿದೆ ಎಂದು ಅಮೆರಿಕ ಆರೋಪಿಸಿದೆ.
ಇಸ್ಲಾಮಿಕ್ ಕ್ರಾಂತಿಯ 41ನೇ ವಾರ್ಷಿಕ ದಿನಾಚರಣೆ ಹಾಗೂ ಸಂಸದೀಯ ಚುನಾವಣೆಗೆ ಕೆಲವು ದಿನಗಳಿರುವಾಗ ‘ಝಫರ್’ ಎಂಬ ಉಪಗ್ರಹವನ್ನು ಇರಾನ್ ಉಡಾಯಿಸಿದೆ.
Next Story





