ಮಿತವ್ಯಯದ ಶಿಕ್ಷಣ ಬಗ್ಗೆ ಉಪನ್ಯಾಸ: 12 ಐಐಎಂಸಿ ವಿದ್ಯಾರ್ಥಿಗಳ ಅಮಾನತು
ಹೊಸದಿಲ್ಲಿ, ಫೆ.10: ದೇಶದಲ್ಲಿ ಮಿತವ್ಯಯದ (ಎಲ್ಲರಿಗೂ ಕೈಗೆಟಕುವ) ಶಿಕ್ಷಣದ ಅಗತ್ಯ ಎಂಬ ವಿಷಯದಲ್ಲಿ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್(ಐಐಎಂಸಿ)ಯ 12 ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಲ್ಲದೆ ತಮಗೆ ಶೋಕಾಸ್ ನೋಟಿಸ್ ಕೂಡಾ ಜಾರಿಗೊಳಿಸಲಾಗಿದೆ. ಆಡಳಿತ ವರ್ಗ ಹಾಗೂ ಬೋಧಕ ವರ್ಗದವರು ಪದೇ ಪದೇ ಸಲಹೆ ನೀಡಿದ್ದರೂ ಐಐಎಂಸಿ ಕ್ಯಾಂಪಸ್‌ನೊಳಗೆ ಅಶಿಸ್ತಿನ ವರ್ತನೆ ತೋರಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಜೆಎನ್‌ಯುನಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಸಮೀಪದ ಐಐಎಂಸಿಗೂ ವ್ಯಾಪಿಸಿದ್ದು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ ಆರೋಪದಡಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
Next Story





