ಪತ್ಪರ್ ಗಂಜ್ ನಲ್ಲಿ ಮನೀಶ್ ಸಿಸೋಡಿಯಾಗೆ ಪ್ರಯಾಸದ ಗೆಲುವು
ಹೊಸದಿಲ್ಲಿ: ಪತ್ಪರ್ ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 2000 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಆರಂಭದಲ್ಲಿ ಮುನ್ನಡೆಯಲ್ಲಿದ್ದ ಸಿಸೋಡಿಯಾ ನಂತರ ಭಾರೀ ಹಿನ್ನಡೆ ಅನುಭವಿಸಿದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ರವೀಂದರ್ ಸಿಂಗ್ ಭಾರೀ ಪ್ರತಿಸ್ಪರ್ಧೆ ಒಡ್ಡಿದ್ದರು. 10ನೆ ಸುತ್ತಿನ ನಂತರ ಸಿಸೋಡಿಯಾ 1,200 ಮತಗಳ ಹಿನ್ನಡೆ ಅನುಭವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಮತ್ತೆ ಅವರು ಮುನ್ನಡೆ ಸಾಧಿಸಿದ್ದು, ಜಯ ಗಳಿಸಿದ್ದಾರೆ.
Next Story