ಪಂಡಿತ್ ದೀನದಯಾಳ್ ‘ಬಲಿದಾನ ಸಮರ್ಪಣ ದಿನ’

ಉಡುಪಿ, ಫೆ.11: ಯಾವುದೇ ಪ್ರಚಾರವನ್ನು ಬಯಸದೆ ನಮ್ಮ ಸೇವೆ ಸಮಾಜಕ್ಕೆ ಅರ್ಪಣೆಯಾಗಬೇಕು. ಪಂಡಿತ್ ದೀನದಯಾಳ್ ಭಾರತೀಯ ರಾಜಕೀಯದಲ್ಲಿ ಅಚ್ಚಳಿಯದ ಹೆಸರು. ಅವರು ಸರಳ, ಸಜ್ಜನರಾಗಿ ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆ ಹೊಂದಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ ಕಾರ್ಯಕತರ್ ರಾಘವೇಂದ್ರ ಕಾಮತ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಪಂಡಿತ್ ದೀನದಯಾಳ್ ಬಲಿದಾನ ಸಮರ್ಪಣ ದಿನ ಕಾರ್ಯಕ್ರವುದಲ್ಲಿ ಅವರು ಉಪನ್ಯಾಸ ನೀಡಿದರು.
ಹೊಸ ರಾಜಕಾರಣದ ದಿಕ್ಕನ್ನು ಆರಂಭಿಸಿದ ಅವರು, ಜನಸಂಘದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬವ ಆಶಯವನ್ನು ಹೊಂದಿದ್ದ ಅವರ ಆದರ್ಶ ಮತ್ತು ಚಿಂತನೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಪ್ರಾಸ್ತಾ ವಿಕವಾಗಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.







