Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲಾಸ್ಪತ್ರೆಯ ತ್ಯಾಜ್ಯ...

ಉಡುಪಿ ಜಿಲ್ಲಾಸ್ಪತ್ರೆಯ ತ್ಯಾಜ್ಯ ವಿಲೇವಾರಿ ಆದಾಯ ಆರೋಗ್ಯ ಸೇವೆಗೆ ಬಳಕೆ

ವಾರ್ತಾಭಾರತಿವಾರ್ತಾಭಾರತಿ11 Feb 2020 8:58 PM IST
share
ಉಡುಪಿ ಜಿಲ್ಲಾಸ್ಪತ್ರೆಯ ತ್ಯಾಜ್ಯ ವಿಲೇವಾರಿ ಆದಾಯ ಆರೋಗ್ಯ ಸೇವೆಗೆ ಬಳಕೆ

ಉಡುಪಿ, ಫೆ.11: ಉಡುಪಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರವು ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆ ಮೂಡಿಸುವುದರ ಜೊತೆಗೆ, ಸಂಗ್ರಹಗೊಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಮಾರಾಟ ಮಾಡುವ ಮೂಲಕ ದೊರೆಯುವ ಆದಾಯವನ್ನು ಆಸ್ಪತ್ರೆಯ ಅಭಿವೃದ್ದಿಗೆಯೇ ಬಳಸುತ್ತಿದೆ.

ಜಿಲ್ಲೆಯ ವಿವಿಧೆಡೆಗಳಲ್ಲಿ ಆರಂಭಿಸಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರಗಳ ಯಶೋಗಾಥೆಗಳು ಒಂದು ಕೇಂದ್ರಕ್ಕಿಂತ ಒಂದು ಭಿನ್ನವಾಗಿದ್ದು, ಕೆಲವೆಡೆ ಗ್ರಾಮಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಗ್ರಾಮದಲ್ಲಿ ಸ್ವಚ್ಛತೆಗೆ ಕಾರಣ ವಾಗಿದ್ದರೆ, ಹಲವು ಗ್ರಾಮ ಗಳಲ್ಲಿ ಕೇಂದ್ರಗಳ ಸಿಬ್ಬಂದಿಗೆ ಆದಾಯ ತಂದುಕೊಡುವ ಮೂಲಗಳಾಗಿವೆ.

ಆದರೆ ಜಿಲ್ಲಾಸ್ಪತ್ರೆಯ ಈ ಕೇಂದ್ರವು ಆದಾಯವನ್ನು ಜಿಲ್ಲಾ ಆರೋಗ್ಯ ರಕ್ಷಾ ಕವಚ ನಿಧಿಗೆ ನೀಡುವ ಮೂಲಕ, ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯವಿರುವ ಔಷಧ ಮತ್ತು ಯಂತ್ರೋಪಕರಣಗಳು ಹಾಗೂ ರೋಗಿಗಳಿಗೆ ಒದಗಿಸುವ ಸೌಲಭ್ಯಗಳ ಖರೀದಿಗೆ ಬಳಸುತ್ತಿದೆ. ಇದು ಈ ಘನ ತ್ಯಾಜ್ಯ ವಿಲೇವಾರಿ ಘಟಕದ ಹೆಗ್ಗಳಿಕೆ ಯಾಗಿದೆ.

ಆಸ್ಪತ್ರೆಯ ತ್ಯಾಜ್ಯಗಳಾದ ರೋಗಿಯ ರಕ್ತಸಿಕ್ತ ಬ್ಯಾಂಡೇಜ್, ಹತ್ತಿ, ಸಿರೆಂಜ್ ಗಳು ಎಂಬ ಬಾವನೆ ಇದೆ. ಆದರೆ ಈ ತ್ಯಾಜ್ಯಗಳು ವೈದ್ಯಕೀಯ ತ್ಯಾಜ್ಯವಾಗಿ ಬೇರೆಡೆ ಸಾಗಿಸಲಾಗುತ್ತವೆ. ಆದರೆ ಆಸ್ಪತ್ರೆಯಲ್ಲಿ ಬಳಸುವ ಸಿರೆಂಜ್ ಪ್ಯಾಕೆಟ್ ಮೇಲಿನ ಕವರ್‌ಗಳು, ಮಾತ್ರೆಗಳ ಮೇಲಿನ ಕವರ್, ಔಷಧದ ಪ್ಯಾಂಕಿಂಗ್ ಬಾಕ್ಸ್‌ಗಳು, ರಟ್ಟಿನ ಬಾಕ್ಸ್‌ಗಳು, ಖಾಲಿ ಗ್ಲುಕೋಸ್ ಬಾಟೆಲ್‌ಗಳು, ಆಸ್ಪತ್ರೆ ಆವರಣದಲ್ಲಿ ದೊರೆಯುವ ಖಾಲಿ ನೀರಿನ ಬಾಟೆಲ್‌ಗಳು ಮುಂತಾದ ನಿರು ಪಯುಕ್ತ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬೇರ್ಪಡಿಸಿ ಅವುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಿ, ಆದಾಯವನು ಗಳಿಸಲಾಗುತ್ತಿದೆ.

ಪ್ರಾರಂಭದಲ್ಲಿ ಪ್ರತಿ ತಿಂಗಳು 250 ಕೆ.ಜಿ.ಯಷ್ಟು ಘನ ತ್ಯಾಜ್ಯ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದು, ಪ್ರಸ್ತುತ ಪ್ರತಿ ತಿಂಗಳು ಒಂದು ಟನ್‌ನಷ್ಟು ತ್ಯಾಜ್ಯ ದೊರೆಯುತ್ತಿದೆ. ಇದನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಮಾರಾಟಕ್ಕೆ ಸಿದ್ದಪಡಿಸು ತ್ತಿದ್ದು, ಕಳೆದ ಬಾರಿ ಸುಮಾರು 5 ಟನ್‌ನಷ್ಟು ಮಾರಾಟ ಮಾಡಿ 33,000ರೂ. ಗಳಿಸಲಾಗಿದೆ. ಇದನ್ನು ಆಸ್ಪತ್ರೆಯ ಆರೋಗ್ಯ ಕ್ಷಾ ಕವಚದ ಬಳಕೆಗೆ ನೀಡಲಾಗಿದೆ.

ಈಗ ಸುಮಾರು 7 ಟನ್‌ನಷ್ಟು ತ್ಯಾಜ್ಯ ಸಂಗ್ರಹಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಸಂಗ್ರಹಗೊಂಡ ತ್ಯಾಜ್ಯವನ್ನು ಹೆಚ್ಚಿನ ಮುತುವರ್ಜಿ ವಹಿಸಿ, ಸಮರ್ಪಕ ರೀತಿಯಲ್ಲಿ ವಿಂಗಡಿಸಲಾಗಿದ್ದು, ಸುಮಾರು 60,000ರೂ. ಆದಾಯ ನಿರೀಕ್ಷಿಸಲಾಗಿದೆ. ವಸ್ತುಗಳ ಹರಾಜು ಕುರಿತಂತೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎನ್ನುತ್ತಾರೆ ಈ ಕೇಂದ್ರದ ಮೇಲ್ವಿಚಾರಕಿ ಜ್ಯೋತಿ. ಇವರಿಗೆ ಸಹಾಯಕರಾಗಿ ರೇವತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರದಲ್ಲಿ ಗೊಬ್ಬರ ತಯಾರಿಕೆ

ಆಸ್ಪತ್ರೆ ಮುಂದಿರುವ ಪಾರ್ಕ್‌ನಲ್ಲಿ ಸಂಗ್ರಹವಾಗುವ ಮರಗಿಡಗಳ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಸಲು, ಈ ಕೇಂದ್ರದಲ್ಲಿ ಘಟಕವನ್ನು ಆರಂಭಿಸಿದ್ದು, ಇಲ್ಲಿ ತಯಾರಾದ ಗೊಬ್ಬರವನ್ನು ಪ್ರತಿ ಬುಟ್ಟಿಗೆ 20ೂ.ನಂಚೆ ಮಾರಾಟ ಮಾಡಲಾಗುತ್ತಿದೆ.

ಈಗಾಗಲೇ ಸಂಗ್ರಹಗೊಂಡಿದ್ದ ಗೊಬ್ಬರವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖರೀದಿಸಿದ್ದು, ಇದೀಗ ಮತ್ತೆ ಗೊಬ್ಬರ ತಯಾರಿಕೆ ಆರಂಭ ಗೊಂಡಿದೆ. ಅಲ್ಲದೇ ಇದೇ ಗೊಬ್ಬರವನ್ನು ಬಳಸಿ ಕೇಂದ್ರದಲ್ಲಿ ಚಿಕ್ಕ ಕೈತೋಟ ಹಾಗೂ ಔಷಧಿಯ ಗಿಡಗಳನ್ನು ಕೂಡ ಬೆಳೆಸಲಾಗುತ್ತಿದೆ.

ಬಯೋಗ್ಯಾಸ್ ಘಟಕ ಆರಂಭ

ಮುಂದಿನ ಹಂತದಲ್ಲಿ ಆಸ್ಪತ್ರೆಯಲ್ಲಿನ ಹಸಿ ತ್ಯಾಜ್ಯ ಅಂದರೆ ಉಳಿದ ಊಟ, ಹಣ್ಣಿನ ಸಿಪ್ಪೆಗಳು ಮುಂತಾದವುಗಳನ್ನು ವಿಲೇವಾರಿ ಮಾಡಲು ಬಯೋಗ್ಯಾಸ್ ಘಟಕ ಆರಂಭಿಸಲು ಉದ್ದೇಶಿಸಲಾಗಿದ್ದು, ಇದರಿಂದ ಆಸ್ಪತ್ರೆಯ ಬಳಕೆಗೆ ಗ್ಯಾಸ್ ಹಾಗೂ ಉತ್ತಮ ಗೊಬ್ಬರ ದೊರೆಯಲಿದೆ.
‘ತ್ಯಾಜ್ಯ ಎಂದರೆ ಮೂಗು ಮುಚ್ಚುವವರು ಒಮ್ಮೆ ಈ ಕೇಂದ್ರಕ್ಕೆ ಭೇಟಿ ನೀಡಬೇಕು. ತ್ಯಾಜ್ಯದ ಯಾವುದೇ ದೃಶ್ಯ ಹಾಗೂ ದುರ್ವಾಸನೆ ಈ ಕೇಂದ್ರ ದಲ್ಲಿಲ್ಲ. ಪಕ್ಕದಲ್ಲೇ ಸರಕಾರಿ ಕಚೇರಿಗಳಿದ್ದರೂ ಯಾರಿಗೂ ಈ ಕೇಂದ್ರದಿಂದ ತೊಂದರೆಯಾಗಿಲ್ಲ. ವಾಸ್ತವವಾಗಿ ಇಲ್ಲಿ ತ್ಯಾಜ್ಯ ವಿಂಗಡನೆ ನಡೆಯುತ್ತಿದೆ ಎಂಬುದು ಹೊರನೋಟಕ್ಕೆ ಕಾಣುವುದಿಲ್ಲ’ ಎಂದು ಮೇಲ್ವಿಚಾರಕಿ ಜ್ಯೋತಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X