Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ತಾನೇ ಸ್ಥಾಪಿಸಿದ ಕಂಪೆನಿಯ ಆಡಳಿತ...

ತಾನೇ ಸ್ಥಾಪಿಸಿದ ಕಂಪೆನಿಯ ಆಡಳಿತ ಮಂಡಳಿಯಿಂದ ಬಿ.ಆರ್. ಶೆಟ್ಟಿ ಹೊರಗೆ ?

ತನ್ನ ಶೇರುಗಳ ಗಾತ್ರದ ಬಗ್ಗೆ ಶೆಟ್ಟಿ ಸುಳ್ಳು ಮಾಹಿತಿ ನೀಡಿದರೆ?

ವಾರ್ತಾಭಾರತಿವಾರ್ತಾಭಾರತಿ11 Feb 2020 9:54 PM IST
share
ತಾನೇ ಸ್ಥಾಪಿಸಿದ ಕಂಪೆನಿಯ ಆಡಳಿತ ಮಂಡಳಿಯಿಂದ ಬಿ.ಆರ್. ಶೆಟ್ಟಿ ಹೊರಗೆ ?

ದುಬೈ (ಯುಎಇ), ಫೆ. 11: ಅನಿವಾಸಿ ಉದ್ಯಮಿ ಬಿ. ಆರ್. ಶೆಟ್ಟಿ ಯುಎಇಯಲ್ಲಿ ತಾನೇ ಸ್ಥಾಪಿಸಿರುವ ‘ಎನ್‌ಎಮ್‌ಸಿ ಹೆಲ್ತ್’ ಸಂಸ್ಥೆಯ ಬೋರ್ಡ್ ಡಿಸ್ಕಶನ್ಸ್‌ನ ಅಧ್ಯಕ್ಷತೆಯಿಂದ ವಜಾಗೊಳ್ಳುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ. ಸಂಸ್ಥೆಯಲ್ಲಿರುವ ತನ್ನ ಶೇರುಗಳ ಗಾತ್ರದ ಬಗ್ಗೆ ಅವರು ತಪ್ಪು ಮಾಹಿತಿ ನೀಡಿದರೆನ್ನಲಾದ ಕಾರಣಕ್ಕೆ ಅವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ತನ್ನ ಶೇರುಗಳ ಗಾತ್ರದ ಬಗ್ಗೆ ಬಿ. ಆರ್. ಶೆಟ್ಟಿ ಕಾನೂನು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ. ನಿಮ್ಮ ಯಾವುದೇ ಶೇರುಗಳನ್ನು ‘ಕೊಲೇಟರಲ್’ ಆಗಿ ನೀಡುವುದಾಗಿ ಮಾತು ಕೊಟ್ಟಿರುವಿರೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕಂಪೆನಿಯು ತನ್ನ ಎಲ್ಲ ಶೇರುದಾರರನ್ನು ಕೋರಿದೆ ಎನ್ನಲಾಗಿದೆ.

ಕಳೆದ ವಾರ ಲಂಡನ್‌ನಲ್ಲಿ ಎನ್‌ಎಮ್‌ಸಿ ಹೆಲ್ತ್ ಕಂಪೆನಿಯ ಸ್ಟಾಕ್  ಮೌಲ್ಯವು ಬಹುತೇಕ ಅರ್ಧಕ್ಕೆ ಕುಸಿದಿತ್ತು.

ಎನ್‌ಎಮ್‌ಸಿಯು ಈ ವ್ಯವಹಾರಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಹಿರಂಗಪಡಿಸಿದೆ, ಬ್ಯಾಲನ್ಸ್ ಶೀಟ್‌ನಲ್ಲಿ ಹಸ್ತಕ್ಷೇಪ ನಡೆಸಿದೆ ಹಾಗೂ ತನ್ನ ಆಸ್ತಿ ಖರೀದಿ ಮೊತ್ತವನ್ನು ಹಿಗ್ಗಿಸಿದೆ ಎಂಬುದಾಗಿ ‘ಮಡ್ಡಿ ವಾಟರ್ಸ್ ಕ್ಯಾಪಿಟಲ್ ಎಲ್‌ಎಲ್‌ಸಿ’ ಆರೋಪಿಸಿದ ಬಳಿಕ, ಕಂಪೆನಿಯು ಸ್ವತಂತ್ರ ತಪಾಸಣೆಯೊಂದನ್ನು ನಡೆಸುತ್ತಿದೆ.

ಮಡ್ಡಿ ವಾಟರ್ಸ್‌ನ ವರದಿಯು 2019 ಡಿಸೆಂಬರ್‌ನಲ್ಲಿ ಹೊರಬಿದ್ದ ಬಳಿಕ ಎನ್‌ಎಮ್‌ಸಿಯ ಶೇರುಗಳ ಮೌಲ್ಯ 70 ಶೇಕಡಕ್ಕಿಂತಲೂ ಅಧಿಕ ಕುಸಿದಿದೆ. ಇದರೊಂದಿಗೆ ಕಂಪೆನಿಯ ಮಾರುಕಟ್ಟೆ ಮೌಲ್ಯವು 1.5 ಬಿಲಿಯ ಪೌಂಡ್‌ಗಿಂತಲೂ ಕೆಳಗೆ ಇಳಿದಿತ್ತು.

ಆದರೆ, ಮಡ್ಡಿ ವಾಟರ್ಸ್‌ನ ವರದಿಯಲ್ಲಿ ಮಾಡಲಾದ ಆರೋಪಗಳನ್ನು ಎನ್‌ಎಂಸಿ ನಿರಾಕರಿಸಿದೆ. ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂಥವು ಎಂದು ಅದು ಹೇಳಿದೆ.

ಬಿ.ಆರ್. ಶೆಟ್ಟಿ ಮತ್ತು ಕಂಪೆನಿ ಉಪಾಧ್ಯಕ್ಷ ಖಲೀಫ ಉಮೈರ್  ಯೂಸುಫ್ ಅಹ್ಮದ್ ಅಲ್ ಮುಹೈರಿ ಅವರ ಶೇರುಗಳ ಗಾತ್ರ ಎಷ್ಟೆಂದು ಸ್ಪಷ್ಟವಾಗುವವರೆಗೆ ಯಾವುದೇ ಬೋರ್ಡ್ ಸಭೆಗಳಿಗೆ ಹಾಜರಾಗದಂತೆ ಕಂಪೆನಿಯು ಅವರಿಗೆ ಸೂಚಿಸಿದೆ. ಶೆಟ್ಟಿ ಮತ್ತು ಬುತ್ತಿ ಮಂಡಳಿಯ ನಿರ್ದೇಶಕರಾಗಿ ಉಳಿಯಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ಎನ್‌ಎಮ್‌ಸಿ ತಿಳಿಸಿದೆ.

ಪ್ರಸಕ್ತ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಖಾಸಗಿ ವಲಯದ ಅತಿ ದೊಡ್ಡ ಆಸ್ಪತ್ರೆಯಾಗಿರುವ ಎನ್‌ಎಮ್‌ಸಿಯನ್ನು ಬಿ.ಆರ್. ಶೆಟ್ಟಿ 1970ರ ದಶಕದಲ್ಲಿ ಅಬುಧಾಬಿಯಲ್ಲಿ ಸ್ಥಾಪಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X