ದ.ಕ.ಜಿಲ್ಲೆಯಲ್ಲಿ ಅಧಿಕವಾಗುತ್ತಿರುವ ಅತ್ಯಾಚಾರ ಪ್ರಕರಣಗಳು ಆಘಾತಕಾರಿ: ವಿಐಎಂ ದ.ಕ. ಜಿಲ್ಲಾ ಸಮಿತಿ
ಮಂಗಳೂರು: ಜಿಲ್ಲೆಯಲ್ಲಿ ದಿನೇ ದಿನೇ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಮತ್ತು ಆಘಾತಕಾರಿ ವಿಚಾರವಾಗಿದೆ. ಇದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.
ಸುಬ್ರಹ್ಮಣ್ಯದಲ್ಲಿ 17 ವರ್ಷದ ಬಾಲಕಿಯನ್ನು ನಾಲ್ಕು ಯುವಕರು ನಿರಂತರವಾಗಿ ಅತ್ಯಾಚಾರ ನಡೆಸಿರುವುದು ಮತ್ತು ಕೋಣಾಜೆ ಸಮೀಪದ ಮಲಾರ್ ಉಗ್ಗನಬೈಲ್ ನಲ್ಲಿ ಮದ್ರಸಕ್ಕೆ ತೆರಳುತ್ತಿದ್ದ ಮೂವರು ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಖಂಡನೀಯ. ಎರಡು ಪ್ರಕರಣಗಳ ದುಷ್ಕರ್ಮಿಗಳನ್ನು ಪೋಲಿಸರು ಬಂಧಿಸಿರುವುದು ಸ್ವಾಗತಾರ್ಹವಾಗಿದೆ. ಎರಡೂ ಪ್ರಕರಣದ ಪರವಾಗಿ ಯಾವುದೇ ವಕೀಲರುಗಳು ವಕಾಲತ್ತು ಮಾಡದೇ ದುಷ್ಕರ್ಮಿಗಳು ಜೀವನ ಪರ್ಯಂತ ಜೈಲಿನಲ್ಲಿರುವಂತೆ ಮಾಡಬೇಕು ಹಾಗೂ ಪಲೀಸರು ಯಾರದೇ ಒತ್ತಡಕ್ಕೆ ಮಣಿದು ಅವರಿಗೆ ಕನಿಕರ ತೋರಿಸಬಾರದೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾ ಕಾರ್ಯದರ್ಶಿ ಝಹನಾ ಬಂಟ್ವಾಳ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.





