ದಿಲ್ಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ. ಚಾಕೊ ರಾಜೀನಾಮೆ

ಹೊಸದಿಲ್ಲಿ, ಫೆ. 12: ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಪಡೆಯಲು ವಿಫಲವಾದ ಬಳಿಕ ದಿಲ್ಲಿ ಕಾಂಗ್ರೆಸ್‌ನ ಉಸ್ತುವಾರಿ ಪಿ.ಸಿ. ಚಾಕೊ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ದಿಲ್ಲಿಯಲ್ಲಿ ಮಂಗಳವಾರ ಚುನಾವಣಾ ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳ ಬಳಿಕ ಕಾಂಗ್ರೆಸ್‌ನ ದಿಲ್ಲಿ ಘಟಕದ ವರಿಷ್ಠ ಸುಭಾಶ್ ಚೋಪ್ರಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎರಡು ಕಾರಣಕ್ಕಾಗಿ ಚಾಕೋ ಅವರು ರಾಜೀನಾಮೆ ನೀಡದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಒಂದನೇಯದು ಚಾಕೋ ಅವರು ಕಳೆದ ಆಗಸ್ಟ್‌ನಲ್ಲಿ ತನ್ನನ್ನು ಜವಾಬ್ದಾರಿಯಿಂದ ಬಿಡುಗಡೆ ನೀಡುವಂತೆ ಪಕ್ಷದಲ್ಲಿ ಕೋರಿದ್ದರು.
ಆದರೆ, ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ದಿಲ್ಲಿ ವ್ಯವಹಾರಗಳನ್ನು ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಅವರಿಗೆ ತಿಳಿಸಲಾಗಿತ್ತು. ಎರಡನೇಯದು ಫಲಿತಾಂಶ ಘೋಷಣೆಯಾದ ಕೂಡಲೇ ಕಾಂಗ್ರೆಸ್ ಪತ್ರಿಕಾಗೋಷ್ಠಿ ಕರೆದು ಪಕ್ಷವನ್ನು ಪುನಾರಚಿಸುವ ಪ್ರಯತ್ನವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಘೋಷಿಸಿತ್ತು. 2015ರ ದಿಲ್ಲಿ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 2014 ನವೆಂಬರ್‌ನಲ್ಲಿ ಚಾಕೊ ಅವರನ್ನು ದಿಲ್ಲಿ ಉಸ್ತುವಾರಿಯಾಗಿ ನಿಯೋಜಿಸಲಾಗಿತ್ತು. ಕುಟುಂಬದೊಂದಿಗೆ ಕೆನಡಾಕ್ಕೆ ಭೇಟಿ ನೀಡಲು ಮೂರು ತಿಂಗಳು ರಜೆ ನೀಡುವಂತೆ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹ್ಮದ್ ಅವರ ಸ್ಥಾನಕ್ಕೆ ಚಾಕೊ ಅವರನ್ನು ನಿಯೋಜಿಸಲಾಗಿತ್ತು.







