ವಿಮಾನ ನಿಲ್ದಾಣಗಳು,ವಿಮಾನಗಳಲ್ಲಿ ಇ-ಸಿಗರೇಟಿಗೆ ನಿಷೇಧ

ಹೊಸದಿಲ್ಲಿ,ಫೆ.12: ನಾಗರಿಕ ವಾಯುಯಾನ ಸುರಕ್ಷಾ ಬ್ಯೂರೊ (ಬಿಸಿಎಎಸ್) ದೇಶದಲ್ಲಿಯ ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಇ-ಸಿಗರೇಟ್ ಮತ್ತು ಅಂತಹ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಇ-ಹುಕ್ಕಾ ಮತ್ತು ಅಂತಹ ಸಾಧನಗಳು ಇ-ಸಿಗರೇಟ್ ವ್ಯಾಪ್ತಿಯಲ್ಲಿ ಸೇರುತ್ತವೆ ಎಂದು ನಿರ್ಧರಿಸಲಾಗಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇಂತಹ ಉತ್ಪನ್ನಗಳ ವಿತರಣೆ,ಮಾರಾಟ,ದಾಸ್ತಾನು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಭಾರತದಿಂದ ನಿರ್ಗಮಿಸುವ ಅಥವಾ ಆಗಮಿಸುವ ಎಲ್ಲ ವಿಮಾನಗಳಲ್ಲಿಯೂ ಇವುಗಳಿಗೆ ನಿಷೇಧ ಹೇರಲಾಗಿದೆ ಎಂದು ಬಿಸಿಎಎಸ್ ತನ್ನ ಆದೇಶದಲ್ಲಿ ತಿಳಿಸಿದೆ.
Next Story





