ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲೇಬಾರದು: ಚೇತನ್ ಚೌಹಾಣ್
ಹೊಸದಿಲ್ಲಿ, ಫೆ.12: ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಲೇಬಾರದು ಎಂದು ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಆಗ್ರಹಿಸಿದ್ದಾರೆ.
ಕ್ರೀಡೆಗೆ ಪ್ರೇಕ್ಷಕರನ್ನು ಮತ್ತೆ ಸೆಳೆಯುವುದಕ್ಕಾಗಿ ಭಾರತ ಹಾಗೂ ಪಾಕ್ ನಡುವೆ ಕ್ರಿಕೆಟ್ ಪಂದ್ಯವನ್ನು ಮರು ಆರಂಭಿಸಬೇಕೆಂಬ ಯುವರಾಜ್ ಸಿಂಗ್ ಸಲಹೆಗೆ ಚೌಹಾಣ್ ಪ್ರತಿಕ್ರಿಯಿಸಿದರು. ಎರಡೂ ರಾಷ್ಟ್ರಗಳ ಸಂಬಂಧ ಚೆನ್ನಾಗಿಲ್ಲ. ಈ ಸಮಯದಲ್ಲಿ ಭಾರತ ಹಾಗೂ ಪಾಕ್ ನಡುವೆ ದ್ವಿಪಕ್ಷೀಯ ಸರಣಿ ನಡೆಯಲೇಬಾರದು. ಪಾಕಿಸ್ತಾನ ಸುರಕ್ಷಿತವಾಗಿಲ್ಲ. ಭಯೋತ್ಪಾದಕರಿಗೆ ಕ್ರಿಕೆಟ್ ಬಗ್ಗೆ ಕಾಳಜಿ ಇಲ್ಲ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಇರುವ ತನಕ ಕ್ರಿಕೆಟ್ ಸರಣಿಯ ಅಗತ್ಯವಿಲ್ಲ ಎಂದರು.
Next Story





