ಐಪಿಎಲ್‌ನಿಂದ ಮ್ಯಾಕ್ಸ್‌ವೆಲ್ ಔಟ್

ಮೆಲ್ಬೋರ್ನ್, ಫೆ.12: ಆಸ್ಟ್ರೇಲಿಯದ ಆಕ್ರಮಣಕಾರಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೊಣಕೈ ಗಾಯದಿಂದಾಗಿ ಐಪಿಎಲ್ ಆರಂಭಿಕ ಪಂದ್ಯಗಳಿಂದ ವಂಚಿತವಾಗುವ ಸಾಧ್ಯತೆಯಿದೆ. ಮ್ಯಾಕ್ಸ್ ವೆಲ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಫೆಬ್ರವರಿ 21ರಿಂದ ಆರಂಭವಾಗಲಿದೆ.
ಮ್ಯಾಕ್ಸ್‌ವೆಲ್ ಮೊಣಕೈ ಸರ್ಜರಿಗೆ ಒಳಗಾಗಲಿದ್ದು, ಎರಡೂ ತಂಡಗಳಲ್ಲಿ ಅವರಿದ್ದ ತೆರವಾದ ಸ್ಥಾನವನ್ನು ಡಿಆರ್ಕಿ ಶಾರ್ಟ್ ತುಂಬಲಿದ್ದಾರೆ. ಮ್ಯಾಕ್ಸ್‌ವೆಲ್‌ಗೆ ಸಂಪೂರ್ಣ ದೈಹಿಕ ಕ್ಷಮತೆ ಪಡೆಯಲು ಕನಿಷ್ಠ ಆರರಿಂದ ಎಂಟು ವಾರಗಳ ಅಗತ್ಯವಿದೆ. ಹೀಗಾಗಿ ಅವರು ಐಪಿಎಲ್‌ನ ಆರಂಭಿಕ ಹಂತದ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಐಪಿಎಲ್ ಮಾರ್ಚ್ 29ರಂದು ಆರಂಭವಾಗಲಿದೆ. ಫ್ರಾಂಚೈಸಿ ಆಧರಿತ ಐಪಿಎಲ್ ಟೂರ್ನಿಯಲ್ಲಿ 31ರ ಹರೆಯದ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಮ್ಯಾಕ್ಸ್ ವೆಲ್ ಇದೀಗ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರು ತೆರಳುತ್ತಿಲ್ಲ.





