ಪ್ರೊ.ವಿಶ್ವನಾಥ್ ಶೆರ್ವೆಗಾರ್‌ಗೆ ಪಿಎಚ್‌ಡಿ

ಉಡುಪಿ, ಫೆ.12:ಕುಂದಾಪುರದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ವಿಶ್ವನಾಥ ಶೆರ್ವೆಗಾರ್ ಇವರ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ವಿಶ್ವನಾಥ್ ಇವರು ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಮಾರ್ಗದರ್ಶನದಲ್ಲಿ ‘ಹೃದಯದ ಧ್ವನಿ ವಿಶ್ಲೇಷಣೆ ಮತ್ತು ವರ್ಗೀಕರಣ’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಕಾರ್ಕಳದ ಬೈಲೂರಿನ ದಿ.ಕೆ.ಮಾಧವ ಶೆರ್ವೆಗಾರ್ ಹಾಗೂ ಸರಸ್ವತಿ ಶೆರ್ವೆಗಾರ್ ಇವರ ಪುತ್ರ.
Next Story





